ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ; ಗಡಿ ಜಿಲ್ಲೆಗೆ ಮುಟ್ಟಿದ ಬಿಸಿ

ಶನಿವಾರ, 28 ಜುಲೈ 2018 (17:02 IST)
ಉತ್ತರ ಕರ್ನಾಟಕ ಪತ್ರೇಕ ರಾಜ್ಯದ ಬಿಸಿ ಗಡಿ ಜಿಲ್ಲೆ ಬೀದರಕ್ಕೆ ಮುಟ್ಟಿದೆ. ಆಗಸ್ಟ್ 2 ರಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ  ಭಾಗದ 13 ಜಿಲ್ಲೆಗಳಿಗೆ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೀದರನಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಸುದ್ದಿ ಗೋಷ್ಠಿ ನಡೆಸಲಾಯಿತು.

ನಮ್ಮ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ 25 ಸಂಘಟನೆಗಳ ಬೆಂಬಲವಿದೆ. 200 ಕ್ಕೂ ಅಧಿಕ ಮಠಾಧೀಶರು ಸೇರಿದಂತೆ ಭಾಗದ 13 ಜಿಲ್ಲೆಯ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆಎಂದು ಹೇಳಿದ್ರು.  ಇನ್ನು ರಾಜ್ಯದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ಮತ್ತು ಸರ್ಕಾರಗಳ ನಿರ್ಲಕ್ಷ್ಯವೇ ನಮ್ಮ ಹೋರಾಟಕ್ಕೆ ಕಾರಣ.

ಭಾಗದಲ್ಲಿ ನಾಲ್ಕು ಸಾವಿರ ರೈತರು ಸಾವಿಗೆ ಶರಣಾಗಿದ್ದಾರೆ. ಇದಕ್ಕೆ ಸರ್ಕಾರಗಳೇ ಕಾರಣ ಎಂದು ಹೋರಾಟ  ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಹಾಗೂ ಸಂಘದ ರಾಜ್ಯಾಧಕ್ಷ ಬಸವರಾಜ ಕರಿಗಾರ ಹೇಳಿಕೆ ನೀಡಿದ್ದಾರೆ.  ಸರ್ಕಾರ ಮತ್ತು ಸಿಎಂ ಎಚ್ .ಡಿ. ಕೆ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ನಮಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ನಿಮಗೆ ಮಹದಾಯಿ ಬಗೆಹರಿಸುವಂತೆ ನಾವು ಕೇಳುವುದಿಲ್ಲ.  ಕಳಸಾ ಬಂಡೂರಿ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಉತ್ತರ ಕರ್ನಾಟಟ ನಾವೇ ಅಭಿವೃದ್ದಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ