ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಣದ ದುರುಪಯೋಗ ಕುರಿತಂತೆ ಸರಣಿಯವಾಗಿ ವರದಿಯನ್ನು ಮಾಡಿತ್ತು.
ಈ ಕುರಿತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಗಮನ ಸೆಳೆದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ.ಮಾ. ಹರೀಶ್ ಅವರಿಗೆ ಮನವಿ ಪತ್ರವೊಂದನ್ನು ನೀಡಿದ್ದರು.
ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದರು. ತನಿಖೆಗೆ ಒತ್ತಾಯ ತೀವ್ರವಾಗುತ್ತಿದ್ದಂತೆಯೇ ವಾಣಿಜ್ಯ ಮಂಡಳಿಯಲ್ಲಿ ಕಡತಗಳು ಮಿಸ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ತನಿಖೆಗಾಗಿ ಆಗ್ರಹಿಸುತ್ತಿದ್ದಂತೆಯೇ, ಪದಾಧಿಕಾರಿಗಳ ಮೀಟಿಂಗ್ ಕರೆದು, ಅವರೊಂದಿಗೆ ಚರ್ಚಿಸುವುದಾಗಿ ಭಾ.ಮಾ ಹರೀಶ್ ಅವರು ತಿಳಿಸಿದ್ದರು.
ಆದರೆ, ಮೀಟಿಂಗೆಗೆ ಬೇಕಾದ ಕಡತಗಳೆ ಕಾಣೆಯಾಗಿವೆಯಂತೆ. ಹಾಗಾಗಿ ಕಳೆದು ಹೋಗಿರುವ ಕಡತಗಳ ಬಗ್ಗೆ ತನಿಖೆ ನಡೆಸುವಂತೆ ಭಾ.ಮಾ.ಹರೀಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚುನಾವಣೆ ನಡೆಯುವುದಕ್ಕೂ ಮುನ್ನ ಹಲವು ವರ್ಷಗಳಿಂದ ಇದ್ದ ದಾಖಲಾತಿಗಳು ಮಿಸ್ ಆಗಿವೆ. ಯಾರೋ ಅವುಗಳನ್ನು ಹೊರಗೆ ತಗೆದುಕೊಂಡು ಹೋಗಿದ್ದಾರೆ ಎಂದು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.