ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲಿ

ಮಂಗಳವಾರ, 20 ಆಗಸ್ಟ್ 2019 (19:07 IST)
ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಗಳು ಆರಂಭಗೊಂಡಿವೆ.

ಮಂಡ್ಯದ ಗೆಜ್ಜಲಗೆರೆ ಕೈಗಾರಿಕಾ ವಲಯದ ಬಳಿ ಆಗ್ರಹ ಪೂರ್ವಕ ಧರಣಿ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಹಿತರಕ್ಷಣಾ ವೇದಿಕೆ ಹಾಗೂ ಕಾವೇರಿ ಕಣಿವೆ ರೈತ ಒಕ್ಕೂಟ ಮತ್ತು ಪ್ರಗತಿಪರ, ಕನ್ನಡಪರ ಸಂಘಟನೆಗಳ ಸದಸ್ಯರು ಇದರಲ್ಲಿ ಭಾಗವಹಿಸಿದ್ದರು.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಬೇಕು. ಅನ್ಯರಾಜ್ಯದವರನ್ನು ನೇಮಕಾತಿ ವೇಳೆ ಕೈಬಿಡಬೇಕೆಂದು ಆಗ್ರಹ ಮಾಡಲಾಯಿತು.

ಕರ್ನಾಟಕ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂಪತ್ ಕುಮಾರ್, ಕಾವೇರಿ‌ ಕಣಿವೆ ರೈತ ಒಕ್ಕೂಟದ ಸಂಚಾಲಕ ಎಂ.ಬಿ.ನಾಗಣ್ಣಗೌಡ, ಕರ್ನಾಟಕ ಹಿತರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಮೇಶ್, ರಾಜ್ಯ ಪದಾಧಿಕಾರಿ ಪೊಲೀಸ್ ಚಲಪತಿ, ಜನಪರ ಹೋರಾಟಗಾರ ಅಭಿಗೌಡ, ಹಿತರಕ್ಷಣಾ ವೇದಿಕೆಯ ರೇವತಿ, ಬೂದನೂರು ಸುನೀಲ್, ಮನು, ಗ್ರಾಪಂ ಸದಸ್ಯ ಬೂದನೂರು ಸತೀಶ ಮೊದಲಾದವರು ಪ್ರತಿಭಟನೆಯಲ್ಲಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ