ನಟಿ ಅನುಷ್ಕಾ ಶೆಟ್ಟಿ ತಾಯಿಗೆ ಕೊಟ್ಟ ಗಿಫ್ಟ್ ಗೆ ಕನ್ನಡಿಗರು ಫಿದಾ

ಬುಧವಾರ, 31 ಜುಲೈ 2019 (16:12 IST)
ಕಾರವಾರದ ಬೆಡಗಿ, ಟಾಲಿವುಡ್ ನಟಿ ತಮ್ಮ ತಾಯಿಯ ಜನುಮದಿನಕ್ಕೆ ಶುಭ ಕೋರಿ ಕನ್ನಡಿಗರ ಮನ ಗೆದ್ದಿದ್ದಾರೆ.

ಅನುಷ್ಕಾ ಶೆಟ್ಟಿ ತಮ್ಮ ತಾಯಿ ಪ್ರಫುಲ್ಲಾ ಅವರ ಜನುಮದಿನಕ್ಕೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಇದಕ್ಕೂ ಮೊದಲು ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಕನ್ನಡದಲ್ಲಿ ಶುಭಾಶಯ ಕೋರಿದ್ದು ಕನ್ನಡಿಗರ ಮನಗೆದ್ದಿದ್ದಾರೆ.

“ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಅಂತ ಅನುಷ್ಕಾ ಶೆಟ್ಟಿ ಬರೆದಿದ್ದಕ್ಕೆ ಸಾಕಷ್ಟು ಮೆಚ್ಚುಗೆಗಳು ಕನ್ನಡಿಗರಿಂದ ಹರಿದುಬರುತ್ತಿವೆ.  

ಟಾಲಿವುಡ್ ನಲ್ಲಿ ಹೆಸರು ಮಾಡಿರೋ ಅನುಷ್ಕಾ ಶೆಟ್ಟಿಯ ಕನ್ನಡ ಪ್ರೇಮಕ್ಕೆ ಹಾಗೂ ಅವರ ತಾಯಿಯ ಜನುಮದಿನಕ್ಕೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ