ಪತ್ರಕರ್ತ ರಾಣಾ ಅಯೂಬ್ ವಿರುದ್ಧ ನಗರದ ವಿದ್ಯಾಗಿರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿಜಾಬ್-ಕೇಸರಿ ವಿವಾದಕ್ಕೆ ಸಂಬಂಧಿಸಿದಂತೆ ಬಿಬಿಸಿ ಸುದ್ದಿವಾಹಿನಿಯಲ್ಲಿ ನಡೆದಿದ್ದ ಚರ್ಚೆಯಲ್ಲಿ ಅವರು 'ಹಿಂದೂ ಟೆರರಿಸ್ಟ್' ಎಂಬ ಪದ ಬಳಕೆ ಮಾಡಿದ್ದರು. ಈ ಸಂಬಂಧ ಹಿಂದೂ ಐಟಿ ಸೆಲ್ನ ಅಶ್ವತ್ಥ್ ದೂರು ದಾಖಲಿಸಿದ್ದರು.