ವಕೀಲ ಜಗದೀಶ್ ಪುತ್ರ ಆರ್ಯ ಗೌಡ ಮೇಲೆ ಎಫ್. ಐ. ಆರ್.

ಭಾನುವಾರ, 13 ಫೆಬ್ರವರಿ 2022 (17:04 IST)
ಹಲ್ಲೆ ಹಾಗೂ ಬೆದರಿಕೆ ಆರೋಪದ ಹಿನ್ನೆಲೆ ವಕೀಲ ಜಗದೀಶ್ ಪುತ್ರನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.ಪುನೀತ್ ಕೆರೆ ಹಳ್ಳಿ ಎಂಬುವರು ನೀಡಿದ ದೂರಿನ ಮೇರೆಗೆ ವಕೀಲ ಜಗದೀಶ್ ಅವರ ಪುತ್ರ ಆರ್ಯಗೌಡ ಮೇಲೆ ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.
ಕಾಲೇಜಿನ ಬಳಿ ಹೋದಾಗ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಸದ್ಯ ಕೋರ್ಟ್ ಆದೇಶದ ಮೇರೆಗೆ ಆರ್ಯಗೌಡ ಮೇಲೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಎಫ್​ಐಆರ್​ ದಾಖ ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ