ಹಿಜಾಬ್ ಗಲಾಟೆ ಬೆಂಗಳೂರಿಗೆ ಹಬ್ತಿದೆ

ಭಾನುವಾರ, 13 ಫೆಬ್ರವರಿ 2022 (15:08 IST)
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ' ಎನ್ನೋ ಮಾತಿಗೆ ಪೂರಕವಾಗುವಂತೆ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಕಾಲೇಜುಗಳಿಂದ ಪ್ರೌಢಶಾಲೆಗಳಿಗೂ ಹಬ್ಬಿಕೊಂಡಿದೆ. ಕರಾವಳಿಯಲ್ಲಿ ಹುಟ್ಟಿಕೊಂಡ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಸದ್ಯ ಸಿಲಿಕಾನ್ ಸಿಟಿಯಲ್ಲೂ ಹರಡಿಕೊಂಡಿದೆ.
ಚಂದ್ರ ಲೇಔಟ್ ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ಶಿಕ್ಷಕಿಯು ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಬೋರ್ಡ್ ಮೇಲೆ ಬರೆದಿದ್ದಾರೆಂದು ಪೋಷಕರು ಆರೋಪಿದ್ದಾರೆ. ಸದ್ಯ ಈ ಆರೋಪಕ್ಕೆ ಶಿಕ್ಷಕಿ ಶಶಿಕಲ ಅವರು ಸ್ಪಷ್ಟನೆ ನೀಡಿದ್ದಾರೆ. ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಪಾಠ ಮಾಡುವಾಗ ಮಕ್ಕಳು ಗಲಾಟೆ ಮಾಡುತ್ತಿದ್ದರು. ಮೂರು ಮಕ್ಕಳಿಗೆ ನಾನು ತಿಳಿ ಹೇಳಿದೆ. ಆದರೂ ಆ ಮೂರು ಮಕ್ಕಳು ಗಲಾಟೆ ಮಾಡುತ್ತಲೇ ಇದ್ದರು. ಹೀಗಾಗಿ ಶಿಕ್ಷಕಿ ಗಲಾಟೆ ಮಾಡಿದ ಮಕ್ಕಳನ್ನು ಕಂಟ್ರೋಲ್ ಮಾಡಲು ಅವರ ಹೆಸರಿನ ಮೊದಲನೇ ಹೆಸರನ್ನು ಬರೆಯುತ್ತಾರೆ. ಇದು ಏನು ಎಂಬ ಪ್ರಶ್ನೆ ಮಾಡುತ್ತಾರೆ. ಈ ವೇಳೆ ಶಿಕ್ಷಕಿ ಇದನ್ನು ಏನಾದರು ಅರ್ಥ ಮಾಡಿಕೊಳ್ಳಿ ಎಂದು ಕೋಪದಿಂದ ಹೇಳುತ್ತಾರೆ. ಈ ವೇಳೆ ಮಕ್ಕಳು ತಮ್ಮ ಇದನ್ನು ತಪ್ಪಾಗಿ ಅರ್ಥೈಸಿ ತಮ್ಮ ಮೇಲೆ ಶಿಕ್ಷಕಿ ಕೆಟ್ಟ ಶಬ್ದ ಬಳಕೆ ಮಾಡಿದ್ದಾರೆಂದು ಪೋಷಕರ ಬಳಿ ದೂರು ನೀಡಿದ್ದಾರೆ. ಬಳಿಕ ಪೋಷಕರು ಶಾಲೆಯ ಬಳಿ ಬಂದು ಗಲಾಟೆ ಮಾಡಿದ್ದಾರೆ ಎಂದು ಶಿಕ್ಷಕಿ ಡಿಡಿಪಿಐ ಮುಂದೆ ಹೇಳಿಕೊಂಡಿದ್ದಾರೆ.
ಹಿಜಾಬ್ ಧರಿಸದಂತೆ ವಿದ್ಯಾರ್ಥಿಗಳ ಎದುರು ಬೋರ್ಡ್ ಮೇಲೆ ಬರೆದಿದ್ದಾರೆ ಎಂದು ಆರೋಪಿಸಲಾದ ಶಿಕ್ಷಕಿ ಜೊತೆಗೆ ಶಿಕ್ಷಣಾಧಿಕಾರಿ ಬೈಲಾಂಜನಪ್ಪ ಚರ್ಚೆ ನಡೆಸಿದ್ದಾರೆ. "ಶಿಕ್ಷಕಿ ಶಶಿಕಲಾ ಬಳಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಶಾಲೆಯಲ್ಲಿ ಪಾಠವನ್ನು ಬಿಟ್ಟು ಬೇರೆ ಯಾವ ವಿಷಯದ ಬಗ್ಗೆ ಪ್ರಸ್ತಾಪಿಸಿಲ್ಲ. ಹಿಜಾಬ್ ವಿವಾದದ ಬಗ್ಗೆ ತರಗತಿಯಲ್ಲಿ ಮಾತನಾಡಿಲ್ಲ ಎಂಬುದಾಗಿ ಶಿಕ್ಷಕಿ ತಿಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜನಪ್ಪ ಸ್ಪಷ್ಟನೆ ನೀಡಿದ್ದಾರೆ. ನಾನು ಇಲ್ಲಿ ಧರ್ಮಕ್ಕೆ ಸಂಬಂಧಿಸಿ ಯಾವುದೇ ಮಾತನ್ನು ಆಡಿಲ್ಲ. ಮಕ್ಕಳ ತಪ್ಪಿ ಗ್ರಹಿಕೆಯಿಂದ ಈ ಗಲಾಟೆ ಮಾಡಿದ್ದಾರೆ ಎಂದು ಶಿಕ್ಷಕಿ ಶಶಿಕಲಾ ಹೇಳಿಕೊಂಡಿದ್ದಾರೆಂದು ತಿಳಿದು ಬಂದಿದೆ.
 
ಬೆಂಗಳೂರು ಚಂದ್ರ ಲೇಔಟ್‌ನಲ್ಲಿರುವ ವಿದ್ಯಾಸಾಗರ್ ಪಬ್ಲಿಕ್ ಶಾಲೆಯಲ್ಲಿ ಹಿಜಾಬ್ ಗಲಾಟೆಗೆ ಕಾರಣರಾದರು ಎಂಬ ಆರೋಪದ ಹಿನ್ನೆಲೆ ಶಿಕ್ಷಕಿ ಶಶಿಕಲಾರನ್ನು ಅಮಾನತುಗೊಳಿಸಲಾಗಿದೆ. ಬೋರ್ಡ್ ಮೇಲೆ ಸಾಂಕೇತಿಕ ಬರಹದ ಬಗ್ಗೆ ವಿದ್ಯಾರ್ಥಿಗಳಲ್ಲಿನ ಗೊಂದಲವೇ ಗಲಾಟೆಗೆ ಕಾರಣವಾಗಿದೆ. ಬೋರ್ಡ್ ಮೇಲೆ ಬರೆದ ಬರಹದ ಬಗ್ಗೆ ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದ್ದು, ಶುಕ್ರವಾರ ಪೋಷಕರ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ