ಕಾಲಾ ಚಸ್ಮಾ ಹಾಡು ಹಾಕಿದಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್ ಎಸ್ ರೆಡ್ಡಿ ಮೇಲೆ ಎಫ್ ಐ ಆರ್

ಶುಕ್ರವಾರ, 17 ಫೆಬ್ರವರಿ 2023 (20:46 IST)
ಕಾಲಾ ಚಸ್ಮಾ ಹಾಡು ಹಾಕಿದಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಬಿಎನ್ ಎಸ್ ರೆಡ್ಡಿ ಮೇಲೆ ಎಫ್ ಐ ಆರ್ ದಾಖಲಾಗಿದೆ. ಬಿಎನ್ ಎಸ್ ರೆಡ್ಡಿ ವಿರುದ್ಧ  ಕಾಪಿರೈಟ್ ಆಕ್ಟ್  ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ‌. ಕಾಪಿರೈಟ್ ಆಕ್ಟ್ ನಡಿ ಬಿಎನ್ ಎಸ್ ರೆಡ್ಡಿ ಸೇರಿದಂತೆ  ನಾಲ್ವರ ಮೇಲೆ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಮುಂಬೈ ಅಂಧೇರಿ ಮೂಲದ ಸಂತೋಷ್ ಎಂಬುವವರಿಂದ ದೂರು ದಾಖಲಾಗಿದ್ದು, ಕ್ಲಬ್ ಕಾರ್ಯಕ್ರಮದಲ್ಲಿ ಕಾಲಾ ಚಸ್ಮಾ, ಚೋಲಿಕೆ ಪೀಚೆ ಕ್ಯಾಹೇ, ಚಮ್ಮಾ ಚಮ್ಮಾ,ಗಂಧಿಬಾತ್ ಹಾಡು ಬಳಸಿದ್ರು.‌ಈ ಹಿನ್ನೆಲೆ ಅನುಮತಿ ಇಲ್ಲದೆ ಹಾಡು ಬಳಸಿದ್ದಕ್ಕಾಗಿ ಇಂದಿರಾನಗರ ಕ್ಲಬ್ ,  ಅಧ್ಯಕ್ಷ ಬಿಎನ್ ಎಸ್ ರೆಡ್ಡಿ, ಸೆಕ್ರೇಟರಿ ನಾಗೇಂದ್ರ , ಜೆನರಲ್ ಮ್ಯಾನೇಜರ್ ಶ್ಯಾಮ್ ಸುಂದರ್ ವಿರುದ್ಧ ದೂರು ದಾಖಲಾಗಿದೆ.ನೋವೆಕ್ಸ್ ಕಮ್ಯೂನಿಕೇಷನ್ ಒಡೆತನದಲ್ಲಿರುವ ಹಾಡುಗಳನ್ನ ಯಾವುದೇ ಸಮಾರಂಭ , ಸಭೆ ,ಕಾರ್ಯಕ್ರಮದಲ್ಲಿ ಧ್ವನಿ ಪ್ರಸಾರ ಮಾಡುವಂತಿಲ್ಲ.ಮಾಹೋಲಿ ಎಕ್ಸ್ ಡಿವೈನ್ ಎಂಬ ಕಾರ್ಯಕ್ರಮದಲ್ಲಿ ಹಾಡುಗಳ ಪ್ರಸಾರ ಮಾಡಲಾಗಿತ್ತು.ಈ ಹಿನ್ನಲೆ ಕಾಪಿರೈಟ್ ಆಕ್ಟ್ ನಡಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ