ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ. ಗಲಾಟೆ ಮಾಡಿ ಪೊಲೀಸ್ ವಶದಲ್ಲಿದ್ದ ಶ್ರೀಕಿ, ವಿಷ್ಣುಭಟ್ ರನ್ನು ಈಗ ಬಂಧಿಸಲಾಗಿದೆ.
ಮೆಡಿಕಲ್ ಚೆಕಪ್ ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಭೀಮಾ ಜ್ಯುವೆಲರ್ಸ್ ಮಾಲೀಕನ ಮಗ ವಿಷ್ಣು ಭಟ್ ಎಂದು ತಿಳಿದು ಬಂದಿದೆ.
ಮೆಡಿಕಲ್ ಚೆಕಪ್ನಲ್ಲಿ ಇಬ್ಬರೂ ಮದ್ಯ ಸೇವಿಸಿರೋದು ದೃಢ ಪಟ್ಟಿದೆ, ಶ್ರೀಕಿ ಮತ್ತು ವಿಷ್ಣು ಭಟ್ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ಮಾಹಿತಿ ನೀಡಿದ್ದಾರೆ.
ಕುಡಿದ ಅಮಲಿನಲ್ಲಿ ಗಲಾಟೆ:
ಕುಡಿದ ಅಮಲಿನಲ್ಲಿದ್ದ ವಿಷ್ಣು ಭಟ್ ಗಲಾಟೆ ಮಾಡಿಕೊಂಡು, ಶ್ರೀಕಿ ಜೊತೆ ಸೇರಿ ಹೋಟೆಲ್ ಸಿಬ್ಬಂದಿ ಮೇಲೆ ಶನಿವಾರ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಗರದ ಜೀವನ್ ಭೀಮಾನಗರ ಪೊಲೀಸರು ವಶಕ್ಕೆ ಪಡೆದಿದ್ದರು.