ಎಟಿಎಂನಲ್ಲಿ ಬೆಂಕಿ ಅವಘಡ: ನೋಡ ನೋಡುತ್ತಿದ್ದ ಹಾಗೇ ಲಕ್ಷಾಂತರ ರೂಪಾಯಿ ಬೆಂಕಿಗಾಹುತಿ

Sampriya

ಶುಕ್ರವಾರ, 28 ಫೆಬ್ರವರಿ 2025 (11:45 IST)
Photo Courtesy X
ಹೊಸಕೋಟೆ: ಎಸ್ ಬಿಐ ಎಟಿಎಂನಲ್ಲಿ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿ ಹಣ ಬೆಂಕಿಗಾಹುತಿಯಾದ ಘಟನೆ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಎಟಿಎಂ ಇರುವ ಕಟ್ಟಡ ನೋಡ ನೋಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಹೊಸಕೋಟೆಯ ಕಾಲೇಜ್ ರಸ್ತೆಯ ಫರ್ವಾಜ್ ಪ್ಲಾಜಾದ ಬಳಿ ಇರುವ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಎಟಿಎಂ ನಲ್ಲಿ 16 ಲಕ್ಷ ಹಣ ಇತ್ತು ಎಂದು ಹೇಳಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ.

ರಸ್ತೆಬಳಿಯೇ ಇದ್ದಕ್ಕಿದ್ದಂತೆ ಎಟಿಎಂ ಹೊತ್ತಿ ಉರಿದ ಪರಿಣಾಮ ಸಾವಿರಾರು ಜನರು ಸೇರಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ