ಹುಬ್ಬಳ್ಳಿಯಲ್ಲಿರುವ ಹೆಚ್ಡಿಕೆ ಮನೆಯಲ್ಲಿ ಅಗ್ನಿ ದುರಂತ
ಹುಬ್ಬಳ್ಳಿ: ನಗರದಲ್ಲಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಎರಡು ಸೋಫಾ ಸೆಟ್ ಬೆಂಕಿಗಾಹುತಿಯಾಗಿದ್ದು, ನಂತರ ಬೆಡ್ ರೂಮಿಗೂ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲ ವಸ್ತುಗಳ ಬೆಂಕಿಗೆ ಆಹುತಿಯಾಗಿವೆ. ಮನೆಯ ಕೆಲಸಗಾರರು ಮತ್ತು ಪೊಲೀಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕೆಲಸಗಾರರು ಮನೆಯ ಮುಂದಿನ ಕಚೇರಿಯಲ್ಲಿ ಮಲಗಿದ್ದರಿಂದ ಅನಾಹುತ ತಪ್ಪಿದೆ.
11 ತಿಂಗಳ ಹಿಂದೆ ಕುಮಾರಸ್ವಾಮಿಯವರು ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡಬೇಕು ಎಂಬ ದೃಷ್ಟಿಯಿಂದ ಹುಬ್ಬಳ್ಳಿಯಲ್ಲಿಯೇ ಮನೆ ಮಾಡಿದ್ದರು.