ಖುಷಿಯಾದಾಗ ಗಾಳಿ ಗುಂಡು ಹಾರಿಸೋದು ಸಂಪ್ರದಾಯ: ಗೃಹ ಸಚಿವ ಅರಗ ಜ್ಞಾನೇಂದ್ರ
ಮಲೆನಾಡು ಭಾಗದಲ್ಲಿ ತುಂಬಾ ಖುಷಿಯಾದಾಗ ಗಾಳಿಯಲ್ಲಿ ಗುಂಡು ಹಾರಾಟ ಮಾಡುತ್ತೇವೆ. ಯಾರಾದರೂ ತೀರಿ ಹೋದ ಸಂದರ್ಭದಲ್ಲೂ ಗಾಳಿಯಲ್ಲಿ ಗುಂಡು ಹಾರಾಟ ಮಾಡುತ್ತೇವೆ. ಕೊಡಗು ಮಲೆನಾಡು ಭಾಗದಲ್ಲಿ ಇಂತಹ ಸಂಪ್ರದಾಯ ಇದೆ ಎಂದು ಹೇಳುವ ಮೂಲಕ ಗೃಹ ಸಚಿವ ಅರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂ
ಡು ಹಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಗೆ ಅಸಮಾಧಾನ ವ್ಯಕ್ತವಾಗಿದೆ.
ಇನ್ನೂ ಕೆಲವೆಡೆ ಇಂತಹ ಸಂಪ್ರದಾಯಗಳು ಇರಬಹುದು. ಭಗವಂತ್ ಖೂಬಾ ಬಂದ ಸಂದರ್ಭದಲ್ಲೂ ಖುಷಿಗೆ ಗಾಳಿಯಲ್ಲಿ ಗುಂಡು ಹಾರಾಟ ಮಾಡಿರಬಹುದು. ಆದರೆ ಇದು ಸಾರ್ವಜನಿಕವಾಗಿ ಮಾಡಿದ್ದು ತಪ್ಪು. ಇದರಿಂದ ಯಾರಿಗಾದೂ ತಾಗಿ ಅನಾಹುತವಾಗಬಹುದು. ಈ ಬಗ್ಗೆ ಈಗಾಗಲೇ ಎಫ್ ಐ ಆರ್ ದಾಖಲಾಗಿದೆ ಎಂದರು.