ಸ್ಟೈಲೋಗೆ ತಗುಲಿದ ಬೆಂಕಿ; ಲಕ್ಷಾಂತರ ರೂ. ನಷ್ಟ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಯೊಂದು ಸಂಪೂರ್ಣ ಭಸ್ಮಗೊಂಡಿದೆ. ವಿದ್ಯುತ್ ಅವಘಡದಿಂದ ಅಂಗಡಿ ಭಸ್ಮಗೊಂಡು ಅಪಾರ ನಷ್ಟವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ರಾಘವೇಂದ್ರ ನಗರ ನಿವಾಸಿ ಕೇಶವ ಭಂಡಾರಿ ಎಂಬವರ ಬೆಳ್ತಂಗಡಿ ಬಸ್ ಸ್ಟಾಂಡ್ ನಲ್ಲಿ ಕಾರ್ಯಚರಿಸುತ್ತಿದ್ದ ಸ್ಟೈಲೋ ಹೇರ್ ಡ್ರೆಸ್ಸ್ಸಸ್ ಹಾಗೂ ಫ್ಯಾನ್ಸಿ ಅಂಗಡಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಪೂರ್ಣ ಭಸ್ಮಗೊಂಡಿದೆ. ವಿದ್ಯುತ್ ಅವಘಡದಿಂದ ಅಂಗಡಿ ಭಸ್ಮಗೊಂಡು ಅಪಾರ ನಷ್ಟವಾಗಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ತಡ ರಾತ್ರಿ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಶಮನ ಮಾಡಿದ್ದಾರೆ.
ಸಾರ್ವಜನಿಕರು ಬೆಂಕಿ ನಂದಿಸುವಲ್ಲಿ ಸಹಕಾರ ನೀಡಿದರು. ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.