ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ಮೊಳಗಿದ ಗುಂಡಿನ ಮೊರೆತದಿಂದ ಇಬ್ಬರು ಆರೋಪಿಗಳ ಬಂಧನವಾಗಿದೆ.
ಕಲಬುರ್ಗಿ ನಗರದ ಪಬ್ಲಿಕ್ ಗಾರ್ಡನ್ ನಲ್ಲಿ ಆರೋಪಿಗಳ ಮೇಲೆ ಪೊಲೀಸ್ ರಿಂದ ಗುಂಡಿನ ದಾಳಿ ನಡೆದಿದೆ. ಉಮೇಶ ಮಾಲಗೆ ಮತ್ತು ಬಾಬು ಅಲಿಯಾಸ್ ಬಾಬ್ಯಾ ಎನ್ನುವ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರೂ ಆರೋಪಿಗಳು ಮೆಕ್ಯಾನಿಕ್ ಆಗಿದ್ದ ರಾಮಕೃಷ್ಣ ಎನ್ನುವಾತನನ್ನು ಕಿಡ್ನಾಪ್ ಮಾಡಿ ಒಂದು ಲಕ್ಷ ರೂಪಾಯಿ ವಸೂಲಿ ಮಾಡಿದ್ದರು. ದರೋಡೆಕೋರರು ಪಬ್ಲಿಕ್ ಗಾರ್ಡನ್ ನಲ್ಲಿ ಇದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಪೊಲೀಸ್ ರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.
ಆತ್ಮರಕ್ಷಣೆಗಾಗಿ ಚೌಕ್ ಪೊಲೀಸ್ ಠಾಣೆಯ ಪಿಎಸ್ ಐ ಹಿರೇಮಠ ರಿಂದ ಆರೋಪಿಗಳ ಮೇಲೆ ಎರಡು ಸುತ್ತು ಫೈರಿಂಗ್ ನಡೆದಿದೆ. ಆರೋಪಿಗಳ ಕಾಲಿಗೆ ಗಾಯವಾಗಿದ್ದು, ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಿಎಸ್ ಐ ಅಕ್ಕಮಹಾದೇವಿ, ಪೇದೆಗಳಾದ ರಾಜಕುಮಾರ್, ನಿಂಗಪ್ಪರಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ನಿನ್ನೆ ರಾತ್ರಿಯೂ ಕೂಡ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಇಬ್ಬರನ್ನು ತಡೆದು ದರೋಡೆ ಮಾಡಿ ಪರಾರಿಯಾಗುತ್ತಿದ್ದರು.