ಶಾಲೆ ಆರಂಭದ ಮೊದಲ ದಿನ ಖಾಸಗಿ ಶಾಲೆಗಳಲ್ಲಿ ನಿಯಮ ಉಲ್ಲಂಘನೆ!

ಸೋಮವಾರ, 23 ಆಗಸ್ಟ್ 2021 (20:30 IST)
ಕೋವಿಡ್ ಮೂರನೇ ಅಲೆಯ ಆತಂಕದಲ್ಲಿಯು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ  ೯, ೧೦ ಹಾಗೂ ಪಿಯುಸಿ ತರಗತಿಗಳನ್ನ ನಡೆಸಲು ಅನುಮತಿ ನೀಡಿರುವ ಸರ್ಕಾರ ಕೆಲವೊಂದು ಮಾರ್ಗಸೂಚಿ ಬಿಡುಗಡೆ ಮಾಡಿ ತರಗತಿಗಳನ್ನು ನಡೆಸಲು ಅನುಮತಿ ನೀಡಿದೆ.
ಕೆಲ ಖಾಸಗೀ ಶಾಲಾ ಖಾಲೇಜುಗಳಲ್ಲಿ  ಮಾರ್ಗಸೂಚಿಗಳು ಉಲ್ಲಂಘನೆ ಮಾಡಿ ತರಗಳನ್ನು ನಡೆಸ್ತಿವೆ,  ಕೋವಿಡ್ ನಿಯಮಗಳನ್ನು ಅನುಸರಿಸಬೇಕಿದ್ದ  ಕಾಲೇಜುಗಳಲ್ಲಿ ಸಂಪೂರ್ಣ ಕೋವಿಡ್  ನಿಯಮಗಳನ್ನು ಗಾಳಿಗೆ ತೂರಿ ಒಂದು ಕೊಠಡಿಯಲ್ಲಿ ೬೦ ವಿದ್ಯಾರ್ಥಿಗಳಿಂದ 70
ವಿದ್ಯಾರ್ಥಿಗಳನ್ನು ಕೂರಿಸಿ  ಒಂದು ಬೆಂಚಿನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಬೇಕಿದ್ದ ಸ್ಥಳದಲ್ಲಿ ಐದು ಹಾಗೂ ನಾಲ್ಕು ವಿದ್ಯಾರ್ಥಿಗಳನ್ನು ಕೂರಿಸಿ   ತರಗತಿಗಳು ನಡೆಸುತ್ತಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಕೆಲ ಖಾಸಗಿ ಕಾಲೇಜುಗಳಲ್ಲಿ ಕಂಡುಬಂದಿದೆ.
ಶ್ರೀನಿವಾಸಪುರ‌ ಅಲ್ಲದೆ ಜಿಲ್ಲೆಯ ಬಹುತೇಕ ಖಾಸಗಿ ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡದೆ ತರಗತಿಗಳನ್ನು ನಡೆಸುತ್ತಿದ್ದು ಯಾವೊಬ್ಬ ಅಧಿಕಾರಿಯೂ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸ ಬೇಕೆಂಬ ಅರಿವು ಕೂಡ ಇಲ್ಲದಂತಾಗಿದೆ, ಸರ್ಕಾರ ದಿನ ಬೆಳಗಾದರೆ ಮೂರನೇ ಅಲೆ ಮಕ್ಕಳಿಗೆ ಹೆಚ್ಚಾಗಿ ಕಾಡುತ್ತದೆ ಎಂಬ ಮುನ್ಸೂಚನೆ ನೀಡ್ತಿದ್ದರೂ ಎಚ್ಚೆತ್ತುಕೊಳ್ಳಬೇಕಾದ ಖಾಸಗಿ ಶಾಲಾ ಕಾಲೇಜು ಆಡಳಿ ಮಂಡಳಿಯವರು ಸಂಪೂರ್ಣವಾಗಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡ್ತಿದ್ದಾರೆ.
ಇದ್ರಿಂದ‌ ಮತ್ತೆ ರಾಜ್ಯದಲ್ಲಿ ಸೋಂಕು ಹೆಚ್ಚಾಗುವ ಭೀತಿ ಎದುರಾಗಿದೆ ಎದ್ರೆ‌ ತಪ್ಪಾಗಲಾರದು ಇನ್ನು ಮಾರ್ಗಸೂಚಿಗಳನ್ನು ಪಾಲನೆ  ಮಾಡದೆ ತರಗತಿಗಳನ್ನು ನಡೆಸುತ್ತಿರುವ ಕಾಲೇಜುಗಳ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ