ಆರತಿ ಬೆಳಗಿ ಶಾಲಾ ವಿದ್ಯಾರ್ಥಿಗಳಿಗೆ ಸ್ವಾಗತ!

ಸೋಮವಾರ, 23 ಆಗಸ್ಟ್ 2021 (18:37 IST)
ರಾಜ್ಯ ಸರ್ಕಾರ ಇಂದಿನಿಂದ 9-10 ಮ
ತ್ತು ಪ್ರಥಮ - ದ್ವಿತೀಯ ಪಿಯುಸಿ ತರಗತಿಗಳನ್ನ ಆರಂಭಿಸಲು ಆದೇಶಿಸಿರುವ  ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ಪ್ರಾರಂಭಿಸಲಾಗಿದೆ.
ರಾಯಚೂರು ತಾಲೂಕಿನ ಸರ್ಕಾರ ಪ್ರೌಢ ಶಾಲೆಯಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಕ್ ತನ್ವೀರ್ ಆಸೀಫ್ ವಿದ್ಯಾರ್ಥಿಗಳಿಗೆ ಹೂಗುಚ್ಛ ಪುಸಕ್ತಗಳನ್ನ ನೀಡಿ ಸ್ವಾಗತಿಸಿದ್ದರೆ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಆರತಿ ಬೆಳಗುವ ಮೂಲ ತರಗತಿಗಳಿಗೆ ಬಾರ ಮಾಡಿಕೊಂಡರು.
ಸರ್ಕಾರದ ನಿರ್ದೇಶನ್ವಯ ಕೋವಿಡ್ ಹಿನ್ನಲೆಯಲ್ಲಿ ಮೊದಲೇ ಶಾಲಾ ಕೊಠಡಿಗಳಿಗೆ ಸ್ಯಾನಿಟೈಷನ್ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಪಾಲಕರ ಒಪ್ಪಿಗೆ ಪತ್ರ ಪಡೆದುಕೊಂಡು ಬಂದವರಿಗೆ ಮಾತ್ರ ತರಗತಿಗೆ ಹಾಜರಾಗಲು ಅವಕಾಶವನ್ನ ನೀಡಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿರುವ ಸರ್ಕಾರಿ, ಅನುದಾನಿ, ಅನುದಾನ ರಹಿತ ಶಾಲಾಗಳನ್ನ ಸೇರಿದಂತೆ ಒಟ್ಟು 449 ಪ್ರೌಢಶಾಲೆಗಳನ್ನ ಆರಂಭಿಸಲಾಗುತ್ತಿದೆ.
ಈಗಾಗಲೇ ಶಿಕ್ಷಣ ಇಲಾಖೆಯಿಂದ ಅಗತ್ಯ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಮಾಸ್ಕ್ ಧರಿಸಿಕೊಂಡು ಬರಬೇಕಾಗಿದ್ದು, ಪಾಲಕರ ಒಪ್ಪಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ತರಗತಿಗಳಿಗೆ ವಿದ್ಯಾರ್ಥಿಗಳು ಅತ್ಯಂತ ಉತ್ಸಕತೆಯಿಂದ ಬರುತ್ತಿದ್ದಾರೆ ಎಂದರು.
ಈ ವೇಳೆ ಸಿಇಒ ಜಿ.ಪಂ. ಶೇಕ್ ತನ್ವೀರ್ ಆಸೀಫ್, ಡಿಡಿಪಿಐ, ಬಿಇಒ ಚಂದ್ರಶೇಖರ್ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು, ಗ್ರಾಮಸ್ಥರು ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ