ಮುಸ್ಲಿಂ ವಿದ್ಯಾರ್ಥಿ ಭಗವದ್ಗೀತೆ ರಸಪ್ರಶ್ನೆಯಲ್ಲಿ ಪ್ರಥಮ
ಭಗವದ್ಗೀತೆ ಕುರಿತ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮುಸ್ಲಿಂ ವಿದ್ಯಾರ್ಥಿ ಪ್ರಥಮ ಸ್ಥಾನ ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಒಂಭತ್ತನೇ ತರಗತಿ ಮುಸ್ಲಿಂ ವಿದ್ಯಾರ್ಥಿ ಶೇಖ್ ಮೊಯಿನುದ್ದೀನ್ ಇಸ್ಕಾನ್ ಏರ್ಪಡಿಸಿದ್ದ ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಬೆಂಗಳೂರಿನ ಸಂಜಯ್ ನಗರದ ಇಸ್ಕಾನ್ ಸಂಸ್ಥೆ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸುಭಾಷ್ ಮೆಮೋರಿಯಲ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿಯಾಗಿರುವ ಶೇಖ್ ಮೊಯಿನುದ್ದೀನ್ ಭಗವದ್ಗೀತೆ ರಸಪ್ರಶ್ನೆಯಲ್ಲಿ ಜಯಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.