ಮೊದಲು ರಮೇಶ್ ಕುಮಾರ್, ನನ್ನನ್ನು ಒಗ್ಗೂಡಿಸಬೇಕಿದೆ: ಸಚಿವ ಕೆ.ಎಚ್‌.ಮುನಿಯಪ್ಪ

Sampriya

ಶುಕ್ರವಾರ, 29 ಮಾರ್ಚ್ 2024 (16:51 IST)
ಬೆಂಗಳೂರು: ʼಕೋಲಾರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡೂ ಬಣದವರು ಒಗ್ಗಟ್ಟಾಗದೆ  ಗೆಲ್ಲಲು ಅಸಾಧ್ಯ. ಅದನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ ಎಂದರೆ ಗೆಲುವು ಅಸಾಧ್ಯ ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು

ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲವರು ಕಾಂಗ್ರೆಸ್‌ ಪಕ್ಷಕ್ಕೆ ಬಂದರು. ಆ ವೇಳೆ ಪಕ್ಷದ ಗೆಲುವಿಗಾಗಿ ನಾನು ಯಾರನ್ನೂ ವಿರೋಧಿಸಿಲ್ಲ. ಆ ಸಂದರ್ಭದಲ್ಲಿ  ರಮೇಶ್‌ ಕುಮಾರ್‌ ಮತ್ತು ನನ್ನ ಮಧ್ಯೆ ಸಮಸ್ಯೆ ಪರಿಹರಿಸುವಂತೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನೇ ಮನವಿ ಮಾಡಿಕೊಂಡಿದ್ದೆ ಎಂದು ಸ್ಮರಿಸಿಕೊಂಡರು.

ರಮೇಶ್ ಕುಮಾರ್ ಮತ್ತು ನನ್ನನ್ನು ಮೊದಲು ಒಗ್ಗೂಡಿಸಿ ನಂತರ ಚುನಾವಣೆ ಬಗ್ಗೆ ತೀರ್ಮಾನಿಸಿ ಎಂದು ಹೇಳಿದ್ದೇನೆ.  ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ನಾನು ಕೂಡ ಒಬ್ಬ ಅಭ್ಯರ್ಥಿಯ ಹೆಸರು ಹೇಳಿದ್ದೇನೆ. ಮೂರನೇ ಅಭ್ಯರ್ಥಿಯ ಹೆಸರನ್ನು ನಾನು ಹೇಳಿಲ್ಲ ಎಂದರು.

ಕಾಂಗ್ರೆಸ್‌ನ ಈಗೀನ ಬೆಳವಣಿಗೆಯಿಂದ ನೋವಾಗಿದೆ. ಆದರೆ, ಪಕ್ಷ ನನಗೆ ಮುಖ್ಯ. ಇಲ್ಲಿ ನಾವಿಬ್ಬರೂ ಒಂದಾಗದಿದದ್ದರೆ ಮೂರನೇ ವ್ಯಕ್ತಿ ಅಭ್ಯರ್ಥಿಯಾಗಿ ಬಂದರೂ ಗೆಲುವು ಕಷ್ಟ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ