ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್?

ಗುರುವಾರ, 1 ಡಿಸೆಂಬರ್ 2022 (11:36 IST)
ಬೆಂಗಳೂರು : ನಗರದ ಅತಿಹೆಚ್ಚು ತೆರಿಗೆ ನೀಡೋ ಏರಿಯಾ ಎಲೆಕ್ಟ್ರಿಕಲ್, ಹಾರ್ಡ್ವೇರ್ಗೆ ಸಂಬಂಧಪಟ್ಟ ಪ್ರತಿಯೊಂದು ವಸ್ತುಗಳು ಸಿಗುವ ಎಸ್ಪಿ ರೋಡ್ ಡಿಸೆಂಬರ್ 13ಕ್ಕೆ ಬಂದ್ ಆಗಲಿದೆ.

ಬೆಂಗಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ವಾಹನಗಳ ಬಿಡಿಭಾಗ ಖರೀದಿಗೆ ಇರುವ ಹಾಟ್ಸ್ಪಾಟ್ ನಗರದ ಎಸ್ಪಿ ರೋಡ್ ಬಂದ್ ಆಗಲಿದೆ. ಅದು ವ್ಯಾಪಾರ ಡಲ್, ವ್ಯಾಪಾರ ಆಗ್ತಿಲ್ಲ ಅಂತಲ್ಲ, ಬದಲಿಗೆ ಪ್ರತಿಭಟಿಸಲು. ಡಿಸೆಂಬರ್ 13ಕ್ಕೆ ಎಸ್ಪಿ ರೋಡ್ ಸಂಪೂರ್ಣ ಸ್ತಬ್ಧವಾಗಲಿದೆ.

ಅಂದು ಹಾರ್ಡ್ವೇರ್, ಎಲೆಕ್ಟ್ರಿಕಲ್ ಸೇರಿ ಪ್ರತಿಯೊಂದು ಆರ್ಥಿಕ ಚಟುವಟಿಕೆಗಳನ್ನು ಬಂದ್ ಮಾಡಿ, ವಿಧಾನಸೌಧದತ್ತ ಮೆರವಣಿಗೆ ಮಾಡಲಿದ್ದಾರೆ ಸಾವಿರಾರು ವರ್ತಕರು. ಜಲಮಂಡಳಿಯ ಚರಂಡಿ ನೀರು ಅಂಗಡಿಗಳ ಒಳಗೆ ನುಗ್ಗಿ ವ್ಯಾಪಾರಕ್ಕೆ ತೊಡಕಾಗಿದೆ.

ಕಳೆದ ಮೂರು ವರ್ಷಗಳಿಂದ ಚರಂಡಿಯ ದುರ್ನಾತಕ್ಕೆ ಅಂಗಡಿಗಳಿಗೆ ಗ್ರಾಹಕರೇ ಬರ್ತಿಲ್ಲವಂತೆ. ಬಿಬಿಎಂಪಿ ಕಮಿಷನರ್ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲವಂತೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಎಸ್ಪಿರೋಡ್ ಬಂದ್ ಮಾಡಿ, ವಿಧಾನಸೌಧಕ್ಕೆ ವರ್ತಕರು ಮೆರವಣಿಗೆ ಮಾಡಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ