ಬೆಳಗ್ಗೆಯಿಂದಲೇ ಸಿಗುತ್ತೆ ಮೀನು : ಯಾಂತ್ರಿಕೃತ ದೋಣಿ ಮೀನುಗಾರಿಕೆಗೆ ಅವಕಾಶ
ಮೀನು ಪ್ರಿಯರಿಗೆ ಲಾಕ್ ಡೌನ್ ಮೂರನೇ ಹಂತದ ವಿಸ್ತರಣೆಯಲ್ಲಿಯೂ ಖುಷಿ ಸುದ್ದಿ ಸಿಕ್ಕಿದೆ.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯತನಕ ಯಾವುದೇ ಅಂಗಡಿ ತೆರೆಯುವಂತಿಲ್ಲ. ಹೀಗಂತ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮೀನುಗಾರರ ಬೇಡಿಕೆಯಂತೆ ಜಿಲ್ಲೆಯಲ್ಲಿ ಇನ್ನು ಮುಂದೆ ಭಟ್ಕಳ ತಾಲೂಕು ಹೊರತುಪಡಿಸಿ ಕೆಲವು ಷರತ್ತುಗಳನ್ನು ವಿಧಿಸಿ ಯಾಂತ್ರಿಕೃತ ಮೀನುಗಾರಿಕೆಗೂ ಅವಕಾಶ ನೀಡಲಾಗಿದೆ ಎಂದಿದ್ದಾರೆ.