ಮೀನುಗಾರಿಕೆ ಆರಂಭ : ಬೋಟ್ ಮಾಲಿಕರೇ ಹುಷಾರ್

ಗುರುವಾರ, 23 ಜುಲೈ 2020 (18:37 IST)
ಪ್ರಸ್ತುತ ಮೀನುಗಾರಿಕೆ ವರ್ಷದ ಪ್ರಾರಂಭವಾಗುತ್ತಿದೆ. ಇದಕ್ಕೂ ಮುನ್ನಾ ಮೀನುಗಾರಿಕೆ ಬೋಟ್‌ ಮಾಲೀಕರಿಗೆ ಖಡಕ್ ಎಚ್ಚರಿಕೆ ಕೊಡಲಾಗಿದೆ.

ಬೋಟ್ ನಲ್ಲಿ ದುಡಿಯುವ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಕಡ್ಡಾಯವಾಗಿ ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕೆ ಇಲಾಖೆಯು ಮುನ್ನೆಚ್ಚರಿಕಾ ಕ್ರಮ ಸೂಚಿಸಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಹೊರರಾಜ್ಯದ ಕಾರ್ಮಿಕರನ್ನು ಕರೆತರುವಾಗ ಕಡ್ಡಾಯವಾಗಿ ಮೀನುಗಾರಿಕೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಹೊರರಾಜ್ಯದ ಮೀನುಗಾರಿಕೆ ಕಾರ್ಮಿಕರನ್ನು (ಕಲಾಸಿಗಳು) ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಪಡಿಸಿ ನಿಗದಿತ ಅವಧಿಯ ಕ್ವಾರಂಟೈನ್‌ಗೆ ಒಳಪಡಿಸಬೇಕು.

ಹೊರರಾಜ್ಯದ ಎಲ್ಲಾ ಮೀನುಗಾರರು ಕಡ್ಡಾಯವಾಗಿ ಗುರುತಿನ ದಾಖಲಾತಿಗಳನ್ನು ಬೋಟ್‌ನಲ್ಲಿ ಇರಿಸಿಕೊಳ್ಳತಕ್ಕದ್ದು. ಇಲಾಖೆಗೆ ಒಂದು ಪ್ರತಿಯನ್ನು ನೀಡಬೇಕು. ಎಲ್ಲಾ ಕಾರ್ಮಿಕರ ಆರೋಗ್ಯದ ಮತ್ತು ಇತರೆ ಸಂಪೂರ್ಣ ಜವಾಬ್ದಾರಿಯನ್ನು ಬೋಟ್ ಮಾಲೀಕರೇ ನಿರ್ವಹಿಸಬೇಕು ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ