ಇಬ್ಬರು ಬಾಲಕಿಯರು, ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಧಾರವಾಡದ ಜಿಲ್ಲೆಯಲ್ಲಿ ಮತ್ತೆ ಐದು ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ-1505 (06, ಬಾಲಕಿ) ಹಾಗೂ ಪಿ-1506 (29, ಮಹಿಳೆ) ಇವರಿಬ್ಬರೂ ತೆಲಂಗಾಣದ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.
ಪಿ-1507 (09,ಬಾಲಕಿ ), ಪಿ-1508 (24, ಮಹಿಳೆ), ಪಿ-1509 (35, ಪುರುಷ) ಈ ಮೂವರು ವ್ಯಕ್ತಿಗಳು ಮಹಾರಾಷ್ಟ್ರ, ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಇದರಿಂದ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ಈಗಾಗಲೇ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.