ಆನೇಕಲ್ : ಇತ್ತೀಚಿನ ದಿನಗಳಲ್ಲಿ ಕಳ್ಳತನಗಳನ್ನು ಮಾಡಲು ಯಾವುದೆಲ್ಲ ಮಾರ್ಗಗಳು ಸಾಧ್ಯವೋ ಅವೆಲ್ಲವನ್ನು ಕಳ್ಳರು ಅನುಸರಿಸುತ್ತಿದ್ದಾರೆ, ಬ್ಯಾಂಕ್ ಗಳ ಬಳಿ ಬರುವ ವಾಹನಗಳನ್ನ ಪಾಲೋ ಮಾಡುವುದು, ಗ್ರಾಹಕರು ಬಳಸುವ ವಸ್ತುಗಳ ಮೇಲೆ ನಿಗಾ ಇದ್ದೇ ಇರುತ್ತೇ, ಇದೀಗ ಕಾಲೇಜುಗಳ ಬಳಿ ಬರುವ ವಾಹನಗಳ ಮೇಲೂ ಕಳ್ಳರು ಗಮನ ಹರಿಸುತ್ತಿದ್ದಾರೆ, ಇಂದು ಅಂತಹದೇ ಒಂದು ಘಟನೆ. ಕಾಲೇಜು ಬಳಿ ಕಾರಿನ ಕಿಟಕಿ ಗಾಜು ಒಡೆದು ಐದು ಲಕ್ಷರೂಗಳನ್ನ ದರೋಡೆ ಮಾಡಿ ಹೋದ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದ ಕಾಲೇಜಿಗೆ ಮಗಳನ್ನು ದಾಖಲಾತಿ ಮಾಡಲು ಆನೇಕಲ್ ಪಟ್ಟಣಕ್ಕೆ ಸಮೀಪದ ದೊಡ್ಡಹಾಗಡೆ ನಿವಾಸಿ ಮಂಜುನಾಥ್ ಎಂಬುವವರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕ್ ಗೆ ಪಾವತಿಸಲು ಐದು ಲಕ್ಷ ರೂಗಳನ್ನು ಬ್ಯಾಗ್ ನಲ್ಲಿರಿಸಿ ಕಾರಿನ ಹಿಂಬದಿ ಸೀಟ್ ಮೇಲಿಟ್ಟಿದ್ದರು, ಮಂಜುನಾಥ್ ಕಾರಿನಿಂದ ಹೋಗಿ ಕಾಲೇಜಿನಲ್ಲಿ ದಾಖಲಾತಿ ಬಗ್ಗೆ ವಿವರಣೆಗಳನ್ನ ಪಡೆದು ಬರುವಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು ಹಣವಿದ್ದ ಬ್ಯಾಗ್ ಅನ್ನು ಕದ್ದೊಯ್ದಿದ್ದರು ಇದರಿಂದ ಮಾಲೀಕ ಶಾಕ್ ಆಗಿದ್ದಾನೆ.
ಇದೇ ಶಾಲೆಗೆ ಸಮೀಪ ಕೆನರಾ ಬ್ಯಾಂಕ್ ನಲ್ಲಿ ಹಣ ಪಾವತಿಸಲು ಬಂದಿದ್ದ ಮಂಜುನಾಥ್ ಹಣ ಹೋಗಿರುವುದಕ್ಕೂ ಮೊದಲು, ಕಳೆದ ಆರು ತಿಂಗಳುಗಳಲ್ಲಿ ಇದು ಮೂರನೇ ಘಟನೆಯಾಗಿದೆ. ಸಮೀಪವಿರುವ ಸೂರ್ಯಸಿಟಿ ಪೊಲೀಸರು ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸದೇ ಇರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ.