ರಾಜಧಾನಿಯಲ್ಲಿ ಫ್ಲೆಕ್ಸ್, ಬ್ಯಾನರ್‌ ಹಾವಳಿ ಬಿಬಿಎಂಪಿ ಗಪ್ ಚುಪ್

ಶುಕ್ರವಾರ, 4 ಆಗಸ್ಟ್ 2023 (14:30 IST)
ಬ್ರ್ಯಾಂಡ್ ಬೆಂಗಳೂರಿಗೆ ಫ್ಲೆಕ್ಸ್, ಬ್ಯಾನರ್‌ಗಳಿಂದ ಕಳಂಕ ಉಂಟಾಗುತ್ತಿದೆ. ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ತೆರವುಗೊಳಿಸದ ಬಿಬಿಎಂಪಿ ಮತ್ತು ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ. ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೇ? ಫ್ಲೆಕ್ಸ್ ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಗರಂ ಆಗಿದ್ದಾರೆ. ಇನ್ನು ಬಿಬಿಎಂಪಿ ಅಸಹಾಯಕತೆಯಿಂದ ಕೈ ಎತ್ತಿದೆ. ಇನ್ನು ಮುಂದೆ ಅನಧಿಕೃತ ಫ್ಲೆಕ್ಸ್ ಕಂಡರೂ ತಲಾ 50 ಸಾವಿರ ಫೈನ್ ಸೇರಿದಂತೆ ಫ್ಲೆಕ್ಸ್ ಮೂಲಕ ಶುಭಾಶಯ ಕೋರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ. 

ಇನ್ನು ಬೆಂಗಳೂರನ್ನೇ ಆಳಿದ್ದ ಜಾಹೀರಾತು ಮಾಫಿಯಾಗೆ ಸರ್ಕಾರ ಮತ್ತೆ ಮಣೆ ಹಾಕುತ್ತಾ? ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾವಳಿ ತಪ್ಪಿಸಲು ಸರ್ಕಾರ ಮತ್ತೆ ಜಾಹೀರಾತು ಕಾಯ್ದೆಗೆ ಹೊಸ ರೂಪ ಕೊಡ್ತಿದ್ಯಾ? ಎಂಬ ಪ್ರಶ್ನೆ ಮೂಡಿದೆ. ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಿ, ಬಿಬಿಎಂಪಿ ಖಜಾನೆ ಭರ್ತಿ ಮಾಡಲು ಜಾಹೀರಾತು ಬೈಲಾಕ್ಕೆ ತಿದ್ದುಪಡಿ ಮಾಡಲಾಗಿದೆ. ಹೈಕೋರ್ಟ್ ಆದೇಶ ಹಾಗೂ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಜಾಹೀರಾತು ಪ್ರದರ್ಶನ ಸಂಪೂರ್ಣ ನಿಷೇಧಿಸಲಾಗಿತ್ತು ಆದ್ರೂ ಕೂಡ ರಾಜಕೀಯ ಪಕ್ಷಗಳು ಸೇರಿ ಖಾಸಗಿಯವರು ಎಲ್ಲೆಂದರಲ್ಲಿ ಫ್ಲೆಕ್ಸ್ ,ಬ್ಯಾನರ್‌ಗಳನ್ನು ಅಳವಡಿಸ್ತಿದ್ರು. ಹೊಸ ಜಾಹೀರಾತು ನೀತಿಗೆ ಸ್ವಪಕ್ಷದ ಶಾಸಕರಿಂದಲೂ ಒತ್ತಡ ಕೇಳಿ ಬಂದಿದ್ದು, ಈಗ ಸರ್ಕಾರ ಹೊಸ ಜಾಹೀರಾತು ನಿಯಮ ಜಾರಿಯಾದ್ರೆ ಸರ್ಕಾರದ ಖಜಾನೆಗೆ 1000 ಕೋಟಿ ವಾರ್ಷಿಕ ಆದಾಯದ ನಿರೀಕ್ಷೆ ಮಾಡಲಾಗಿದೆ. 

ಇನ್ನೂ ಹೊಸ ಜಾಹೀರಾತು ಕಾಯ್ದೆಯಲ್ಲಿ ಯಾವ ಮಾನದಂಡಗಳು ಇರುತ್ತೆ ಅಂತ ನೋಡೋದಾದ್ರೆ

- ಯಾವ ಯಾವ ಪ್ರದೇಶದಲ್ಲಿ ಅವಕಾಶ ನೀಡಬೇಕು 
- ಎಷ್ಟು ದರ  ನಿಗದಿ ಮಾಡಬೇಕು
- ಹೋಲ್ಡಿಂಗ್ ಗಳಿಗೆ ಪ್ರತ್ಯೇಕ ನಿಯಮ ಜಾರಿ
- ಬಿಬಿಎಂಪಿಯಿಂದಲೇ ಜಾಹೀರಾತು ಸ್ಥಳ ನಿಗದಿ
- ಪ್ರತಿ ಜಾಹೀರಾತು ಹೋರ್ಡಿಂಗ್‌ಗೂ ಪ್ರತ್ಯೇಕ ಆರ್‌ಎಫ್‌ಐಡಿ ಸಂಖ್ಯೆ ನಿಗದಿ
- ನಿಗದಿತ ಹೋರ್ಡಿಂಗ್ ಗೆ ಜಿಪಿಎಸ್ ಅಳವಡಿಕೆಗೆ ತೀರ್ಮಾನ
- ನಿರ್ದಿಷ್ಟ ಜಾಹೀರಾತು ಫಲಕಕ್ಕೆ ಮಾತ್ರ ಅನುಮತಿಗೆ ತೀರ್ಮಾನ
- ಹರಾಜಿನ ಮೂಲಕ ಜಾಹೀರಾತು ಪ್ರದರ್ಶಕರಿಗೆ ಅನುಮತಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ