ಕಳೆದ ಎರಡು ದಿನಗಳಿಂದ ಕೃಷ್ಣ ನದಿಯ ಪ್ರವಾಹ ಕಡಿಮೆ ಆಗಿದ್ದು,ಜನತೆಯಲ್ಲಿ ಆತಂಕ ದೂರಾಗಿದೆ.ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ ಪ್ರವಾಹ ದಿಂದ ಸಂಪೂರ್ಣ ಜಲಾವೃತ ಗೊಂಡು,ಜಮಖಂಡಿ ವಿಜಯಪುರ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತು.ಈಗ ನೀರಿನ ಹರಿವು ಕಡಿಮೆ ಆಗಿದ ಪರಿಣಾಮ,ಸಂಚಾರಕ್ಕೆ ಸೇತುವೆ ಮುಕ್ತವಾಗಿದೆ.ಆದರೆ ರಸ್ತೆ ಎಲ್ಲಾ ಹಾಳಾಗಿ ಹೋಗಿದ್ದು,ಸಂಚಾರ ತೀವ್ರ ತೊಂದರೆ ಉಂಟಾಗಿದೆ.ಈ ಹಿನ್ನಲೆ ಜಮಖಂಡಿ ಶಾಸಕರಾದ ಆನಂದ ನ್ಯಾಮಗೌಡರ ಅವರು,ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಸೂಚನೆ ನೀಡಿದ ಪರಿಣಾಮ ದುರಸ್ತಿ ಕಾರ್ಯ ನಡೆದಿದೆ.ಒಂದು ವಾರಕಾಲ ನೀರಿನಲ್ಲಿ ಸೇತುವೆ ಮುಳಗಡೆ ಆಗಿತ್ತು. ಈ ಸಂದರ್ಭದಲ್ಲಿ ಡಾಂಬರೀಕರಣ ಇರುವ ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿದ ಪರಿಣಾಮ ಅಲ್ಲಿಲ್ಲಿ ತಗ್ಗು ಉಂಟಾಗಿದೆ.ಲೋಕೋಪಯೋಗಿ ಇಲಾಖೆ ವತಿಯಿಂದ ಕಡಿ ಹಾಗೂ ಗಟ್ಟಿ ಮಣ್ಣು ಹಾಕಿ,ದುರಸ್ತಿ ಮಾಡುತ್ತಿದ್ದಾರೆ.ವಿಜಯಪುರ ದಿಂದ ಬೆಳಗಾವಿ ಹಾಗೂ ಧಾರವಾಡ ಗೆ ಹೋಗಲು ಜಮಖಂಡಿ ಮಾರ್ಗ ಈ ಸೇತುವೆ ಮೇಲೆ ಸಂಚಾರ ಮಾಡಬೇಕಾದ ಅನಿವಾರ್ಯ ಇತ್ತು. ಸೇತುವೆ ಮುಳಗಡೆಯಿಂದ ಸಂಚಾರ ಬಂದ್ ಆಗಿ ಸುತ್ತುವರೆದು ಸಂಚರಿಸುವ ಮೂಲಕ ಪ್ರಯಾಣಿಕರಿಗೆ ಕಿರಿಕಿರಿ ಆಗಿತ್ತು. ಈ ಹಿನ್ನಲೆಯಲ್ಲಿ ಶಾಸಕ ಸೂಚನೆ ಮೇರೆಗೆ ದುರಸ್ತಿ ಕಾರ್ಯ ಭರದಿಂದ ಸಾಗಿಸಿದೆ.ವಿಜಯಪುರ ಮಾರ್ಗ ಅಷ್ಟೇ ಅಲ್ಲದೆ ಸುತ್ತ ಮುತ್ತುಲಿನ ಗ್ರಾಮದ ಜನತೆ ಸಂಚಾರಕ್ಕೆ ಇದೇ ಸೇತುವೆ ಮಾರ್ಗವಾಗಿತ್ತು ಎಂದು ಶಾಸಕ ಆನಂದ ನ್ಯಾಮಗೌಡ ತಿಳಿಸಿದ್ದಾರೆ.