2-3 ದಿನಗಳಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಹಣ ಬಿಡುಗಡೆಯಾಗಲಿದೆ- ಸಿಎಂ ಯಡಿಯೂರಪ್ಪ

ಭಾನುವಾರ, 22 ಸೆಪ್ಟಂಬರ್ 2019 (14:56 IST)
ನವದೆಹಲಿ : ರಾಜ್ಯ ನೆರೆ ಪರಿಹಾರ ವಿಚಾರದ ಕುರಿತು ಇಂದು ಕೆಂದ್ರ ಸಚಿವ ಅಮಿತ್ ಶಾ ಜೊತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ.
ದೆಹಲಿಯಲ್ಲಿರುವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ಅಮಿತ್ ಶಾ ಜೊತೆ ಅರ್ಧಗಂಟೆ ಮಾತುಕತೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಡಿಸಿಎಂಗಳಾದ ಅಶ್ವತ್ಥ್ ನಾರಾಯಣ್, ಸವದಿ ಸಾಥ್ ನೀಡಿದ್ದಾರೆ. ಸಿಎಂ ಮಾತುಕತೆ ಬಳಿಕ  ಅಮಿತ್ ಶಾ ಅವರು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, 2-3 ದಿನಗಳಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಹಣ ಬಿಡುಗಡೆಯಾಗಲಿದೆ. ಅಮಿತ್ ಶಾ ಪರಿಶೀಲನೆ ನಡೆಸಿದ ಬಳಿಕ ಪರಿಹಾರ ಬಿಡುಗಡೆ ಮಾಡಲಿದ್ದಾರೆ. ಪರಿಹಾರ ಕಾರ್ಯ ಆರಂಭಿಸಲು 2 ಸಾವಿರ ಕೋಟಿ ಹಣಕ್ಕೆ ಮನವಿ ಮಾಡಿದ್ದೇನೆ. ಖುದ್ದು ಅಮಿತ್ ಶಾ ನೆರೆ ಪೀಡಿತ ಪ್ರದೇಶ ಪರಿಶೀಲನೆ ನಡೆಸಲಿದ್ದಾರೆ. ಪ್ರವಾಹ ಸ್ಥಳಗಳಿಗೆ ಹಣ ಬಿಡುಗಡೆಗೆ ನೀತಿ ಸಂಹಿತೆ ಅಡ್ಡಿಯಾಗಲ್ಲ ಎಂದು ಹೇಳಿದ್ದಾರೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ