ಚಿನ್ನ,ಬೆಳ್ಳಿಯ ದರದಲ್ಲಿ ಬಾರೀ ಏರಿಳಿತ-ಅಮೇರಿಕ ಬ್ಯಾಂಕ್ ಗಳ ದಿವಾಳಿತನದಿಂದ ಎಫೆಕ್ಟ್,,!
ಭಾನುವಾರ, 26 ಮಾರ್ಚ್ 2023 (14:20 IST)
ಯುಗಾದಿ ಸಂಭ್ರಮದ ಹೊತ್ತಲ್ಲೇ ಚಿನ್ನದ ದರದ ಏರಿಳಿತ ಜನರನ್ನ ಕಂಗಾಲಾಗಿಸಿದೆ. ಹಳದಿ ಲೋಹದ ದರ ಆಕಾಶಕ್ಕೇರಿದ್ದು, ಷೇರು ಮಾರುಕಟ್ಟೆಯ ಮೇಲೂ ಇದರ ಎಫೆಕ್ಟ್ ಬೀಳುತ್ತಿದೆ. ಗಗನಕ್ಕೇರಿರೋ ಚಿನ್ನದ ದರ ಆಭರಣ ಪ್ರಿಯರೇ ಹೆಚ್ಚಿರುವ ಭಾರತದ ಮೇಲೂ ಪರಿಣಾಮ ಬೀರುತ್ತಿದೆ.
ಚಿನ್ನ ಅಂದ್ರೆ ಭಾರತೀಯರಿಗೆ ಎಲ್ಲಿಲ್ಲದ ವ್ಯಾಮೋಹ. ಚಿನ್ನ ಅಂದ್ರೆ ಒಂದು ರೀತಿಯ ಸಾಂಪ್ರದಾಯಿಕ ಗೌರವ.ಇಂತಹ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿರೋದು ಆಭರಣಪ್ರಿಯರಿಗೆ ಶಾಕ್ ನೀಡಿದೆ.ರಷ್ಯಾ-ಉಕ್ರೇನ್ ಯುದ್ಧದ ಎಫೆಕ್ಟ್, ಅಮೆರಿಕಾದ ಬ್ಯಾಂಕ್ ಗಳ ದಿವಾಳಿತನದಿಂದ ಚಿನ್ನ-ಬೆಳ್ಳಿಯ ದರ ಕಣ್ಣಾಮುಚ್ಚಾಲೆ ಆಡುತ್ತಿದೆ ಅಂತಿದ್ದಾರೆ ತಜ್ಞರು.
ಕಳೆದ 10 ದಿನದಲ್ಲಿ ಬಂಗಾರ ದರ 7 ಬಾರಿ ಏರಿಕೆಯಾಗಿದೆ. ಆದರೆ ಬರೀ 2 ಬಾರಿ ಮಾತ್ರ ಇಳಿಕೆಯಾಗಿದೆ. ಒಂದು ಬಾರಿ ಸ್ಥಿರತೆ ಕಂಡಿದೆ. ನಿನ್ನೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದ್ದರೂ ಭಾರತದಲ್ಲಿ 500 ರೂಪಾಯಿ ಇಳಿದಿತ್ತು. ಆದರೆ ಇಂದು 200 ರೂಪಾಯಿ ಏರಿಕೆಯಾಗಿದೆ.ಚಿನ್ನದ ಬೆಲೆ ಏರಿಕೆಗೆ ಕಾರಣ ಏನು ಅಂತ ವ್ಯಾಪಾರ ಸ್ಥರಿಗೆ ಕೇಳಿದ್ರೆ ಆರ್ಥಿಕ ಹಿಂಜರಿತ ಅಂತಿದ್ದಾರೆ.
ಇನ್ನು 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 200 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 55,000 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಕೂಡಾ 220 ರೂಪಾಯಿ ಹಿಗ್ಗಿದ್ದು ಪ್ರಸ್ತುತ 60,000 ರೂಪಾಯಿ ಆಗಿದೆ.ಪ್ರಮುಖ ನಗರಗಳಲ್ಲಿರೋ ಚಿನ್ನದ ದರವನ್ನ ಗಮನಿಸೋದಾದ್ರೆ.
ಎಲ್ಲೆಲ್ಲಿ ಎಷ್ಟು ದರ?
ಬೆಂಗಳೂರು
- 22 ಕ್ಯಾರೆಟ್ ಚಿನ್ನ: 55,050 ರೂಪಾಯಿ
- 24 ಕ್ಯಾರೆಟ್ ಚಿನ್ನ: 60,050 ರೂಪಾಯಿ
ಮುಂಬೈ
- 22 ಕ್ಯಾರೆಟ್ ಚಿನ್ನ: 55,000 ರೂಪಾಯಿ
- 24 ಕ್ಯಾರೆಟ್ ಚಿನ್ನ: 60,000 ರೂಪಾಯಿ
ದೆಹಲಿ
- 22 ಕ್ಯಾರೆಟ್ ಚಿನ್ನ: 55,150 ರೂಪಾಯಿ
- 24 ಕ್ಯಾರೆಟ್ ಚಿನ್ನ: 60,150 ರೂಪಾಯಿ
ಇತ್ತ ಚಿನ್ನದ ದರ ಇನ್ನೆರಡು ತಿಂಗಳಲ್ಲಿ ಮತ್ತಷ್ಟು ಏರಿಕೆಯಾಗೋ ಸಾಧ್ಯತೆ ಇದೆ ಅಂತಾ ಚಿನ್ನದ ವ್ಯಾಪಾರಿಗಳು ಕೂಡ ಎಚ್ಚರಿಕೆ ನೀಡಿದ್ದಾರೆ. ಚಿನ್ನ-ಬೆಳ್ಳಿಯ ದರ ಮಾರ್ಚ್ ತಿಂಗಳಲ್ಲಿ ಕಡಿಮೆಯಾಗಬೇಕಿತ್ತು, ಆದ್ರೆ ಏರಿಕೆಯಾಗಿರೋದು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
ಅಮೆರಿಕ ಬ್ಯಾಂಕ್ ಗಳ ದಿವಾಳಿತನ, ಜಾಗತಿಕ ಮಾರುಕಟ್ಟೆಯ ಪರಿಣಾಮಗಳಿಂದ ಚಿನ್ನದ ದರ ಗಗನಕ್ಕೇರಿದೆ. ಸದ್ಯ ಸಾವಿರದ ಗಡಿ ದಾಟಿರೋ ಚಿನ್ನದ ದರ ಮುಂದಿನ ದಿನಗಳಲ್ಲಿ ಮತ್ತೆ ಎಷ್ಟು ಏರಿಕೆಯಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ,