ಅದು ಮಧ್ಯಾರಾತ್ರಿಯ ಸಮಯ.ಶೌಚಾಲಯಕ್ಕೆ ತೆರಳಿದ್ದ ಇಬ್ಬರು 1 ಕೋಟಿ ಮೌಲ್ಯದ ಚಿನ್ನದ ಜೊತೆಗೆ ಹೋಗಿದ್ರು.ಪೊಲೀಸ್ ಸೋಗಿನಲ್ಲಿ ಬಂದ ಮತ್ತಿಬ್ಬರು ಇದನ್ನೇ ಸರಿಯಾದ ಸಮಯ ಅಂತಾ ಅನ್ಕೊಂಡಿದ್ರು.ಆಟೋದಲ್ಲಿ ಕರೆದೊಯ್ದ ಆಸಾಮಿಗಳು ಎರಡು ಕೆಜಿ ಚಿನ್ನದ ಗಟ್ಟಿ ಜೊತೆಗೆ ಪರಾರಿಯಾಗಿದ್ದಾರೆ.ಸಿಲಿಕಾನ್ ಸಿಟಿ ಬೆಂಗಳೂರಿನ ಸಣ್ಣ ಸಣ್ಣ ಗಲ್ಲಿಯಲ್ಲೂ ಕೂಡ ಕೋಟಿ ಕೋಟಿ ಮೌಲ್ಯದ ವ್ಯವಹಾರ ನಡೆಯುತ್ತೆ.ಕೆಲವರು ಕಷ್ಟ ಪಟ್ಟು ದುಡಿದ್ರೆ ಇನ್ನು ಕೆಲವರು ಕಂಡವರ ಹಣದ ಮೇಲೆ ಕಣ್ಣಿಟ್ಟಿರ್ತಾರೆ.ಸರಿಯಾದ ಸಮಯ ನೋಡಿಕೊಂಡು ಕನ್ನ ಹಾಕ್ತಾರೆ.ಇಲ್ಲಾಗಿರೋದು ಕೂಡ ಇದೇ.ಪೊಲೀಸ್ ಸೋಗಿನಲ್ಲಿ ಬಂದ ಖದೀಮರು ಎರಡು ಕೆಜಿ ಚಿನ್ನದ ಜೊತೆ ಪರಾರಿಯಾಗಿದ್ದಾರೆ.
ತನಗಾದ ನೋವನ್ನ ತೋಡಿಕೊಳ್ತಿರೊ ಯುವಕನ ಹೆಸರು ಅಬ್ದುಲ್ ರಜಾಕ್.ರಾಯಚೂರು ಮೂಲದ ಉದ್ಯಮಿ ಖಾದಿರ್ ಪಾಷ ಬಳಿ ಕೆಲಸ ಮಾಡಿಕೊಂಡಿದ್ದಾನೆ.ಚಿನ್ನದ ಬ್ಯುಸಿನೆಸ್ ಮಾಡಿಕೊಂಡಿದ್ದ ಖಾದಿರ್ ಪಾಷ ಬೆಂಗಳೂರು ಸಂಪರ್ಕ ಹೊಂದಿದ್ದ.ರಾಯಚೂರಿನಿಂದ ಹಣ ಕೊಟ್ಟು ಕಳಿಸ್ತಿದ್ದ ಉದ್ಯಮಿ ಬೆಂಗಳೂರಿನಿಂದ ಚಿನ್ನದ ಗಟ್ಟಿ ತರಿಸಿಕೊಳ್ತಿದ್ದ.ಅದ್ರಂತೆ ಅಬ್ದುಲ್ ರಜಾಕ್,ಮಲ್ಲಯ್ಯ,ಸುನೀಲ್ ಕುಮಾರ್ ಎಂಬುವವರಿಗೆ ಮಾರ್ಚ್ 10 ರಂದು ಒಟ್ಟು 1 ಕೋಟಿ 12 ಲಕ್ಷ ಕೊಟ್ಟು ಬಸ್ ಟಿಕೆಟ್ ಬುಕ್ ಮಾಡಿ ಬೆಂಗಳೂರಿನಿಂದ ಚಿನ್ನದ ಗಟ್ಟಿ ತರುವಂತೆ ಕಳಿಸಿದ್ದ.ಮಾರ್ಚ್ 11 ರಂದು ರಾಜಾ ಮಾರ್ಕೆಟ್ ನಲ್ಲಿ ಚಿನ್ನದ ಗಟ್ಟಿ ಖರೀದಿಸಿದ್ದ ಮೂವರು ವಾಪಸ್ಸು ರಾಯಚೂರಿಗೆ ತೆರಳಲು ಮುಂದಾಗಿದ್ರು.ಅದ್ರಂತೆ ಮಾರ್ಚ್ 11 ರಂದು 11 ಗಂಟೆಗೆ ಬಸ್ ಟಿಕೆಟ್ ಬುಕ್ ಆಗಿತ್ತು.ಇನ್ನೇನು ಬಸ್ ಹತ್ತಿ ರಾಯಚೂರು ತೆರಳಬೇಕಿತ್ತು ಅಲ್ಲೇ ಸಿಕ್ಕಿದ್ದು ನೋಡಿ ಟ್ವಿಸ್ಟ್.