ಒಂದೆಡೆ ಚುಮುಚುಮು ಚಳಿ, ಮತ್ತೊಂದೆಡೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಯಾವ ರೀತಿ ವಾತಾವರಣ ಇರುತ್ತದೆಯೋ ಅದೇ ರೀತಿ ವಾತಾವರಣ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಡುಬಂತು . ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಜಿಟಿಜಿಟಿ ಮಳೆಯಾಗುತ್ತಿದೆ. ನಿನ್ನೆಯಿಂದಲೇ ಮಳೆ ಆರಂಭವಾಗಿದ್ದು ಅದಿನ್ನೂ ನಿಂತಿಲ್ಲ, ಬೆಳ್ಳಂಬೆಳಗ್ಗೆ ಆಫೀಸು, ಕಚೇರಿ, ಕೆಲಸ ಕಾರ್ಯ, ಶಾಲಾ-ಕಾಲೇಜುಗಳಿಗೆ ಹೋಗುವವರು ಮಳೆರಾಯನಿಗೆ ಬೈಯುತ್ತಾ ಮನೆಯಿಂದ ಕೊಡೆ ಹಿಡಿದುಕೊಂಡು,ಶ್ವೆಟರ್, ಟೊಪ್ಪಿ, ರೈನ್ ಕೋಟ್ ಧರಿಸಿ ಹೊರಬಂದಿದ್ದಾರೆ. ಅದರ ಜೊತೆಗೆ ಮಂಜು ಕವಿದ ವಾತಾವರಣವೂ ನಿರ್ಮಾಣವಾಗಿದೆ.
ನಿನ್ನೆ ಯಿಂದ ಮೊಡ ಕವಿದ ವಾತಾವರಣ ವಿದ್ದು ಕೆಲವೆಡೆ ಮಳೆಯಾಗಿದ್ದು ಮುಂದಿನ ಎರಡು ಮೂರು ದಿನಗಳ ಕಾಲ ಮಳೆಯಾಗುವುದು ಎಂದು ಮುನ್ಸೂಚನೆ ಸಿಕ್ಕಿದೆ, ಅಲ್ಲದೆ ರಾಜ್ಯದ ನಾನಾ ಕಡೆ ಮಳೆ ಯಾಗುತ್ತಿದ್ದೆ.ಅಷ್ಟೇ ಅಲ್ಲ. ತಮಿಳುನಾಡು ಸುತ್ತಮುತ್ತಲಿನ ಸಮುದ್ರ ಮಟ್ಟದಿಂದ 7.6 ಕಿ.ಮೀಟರ್ ಎತ್ತರದ ವರೆಗೂ ಮೇಲ್ಮೈ ಸುಳಿಗಾಳಿ ವಿಸ್ತರಿಸಿದೆ.