ಕೃಷಿಕರನ್ನು ಮದುವೆಯಾಗುವವರಿಗೆ ಆನಗೋಡು ಗ್ರಾಮದ ಸೇವಾ ಸಹಕಾರ ಸಂಘದಿಂದ ಬಂಪರ್ ಆಫರ್

ಗುರುವಾರ, 31 ಜನವರಿ 2019 (15:42 IST)
ಕಾರವಾರ : ರೈತಾಪಿ ಯುವಕನನ್ನು ಮದುವೆಯಾಗುವವರಿಗೆ ಆನಗೋಡು ಗ್ರಾಮದ ಸೇವಾ ಸಹಕಾರ ಸಂಘ ಬಂಪರ್ ಆಫರ್ ವೊಂದನ್ನು ಘೋಷಣೆ ಮಾಡಿದೆ.


ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ರೈತಾಪಿ ಯುವಕರಿಗೆ ಮದುವೆನೇ ಆಗುತ್ತಿಲ್ಲ. ಕೃಷಿಕರಿಗೆ ಹೆಣ್ಣುಕೊಡಲು ಯಾರು ಮುಂದೆ ಬರುತ್ತಿಲ್ಲ. ಯಲ್ಲಾಪುರ ತಾಲೂಕಿನ ಆನಗೋಡು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, 30ಕ್ಕೂ ಹೆಚ್ಚು ಜನ ಯುವಕರು ಇನ್ನೂ ಬ್ರಹ್ಮಚಾರಿಗಳಾಗಿಯೇ ಉಳಿದುಕೊಂಡಿದ್ದಾರೆ.


ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆನಗೋಡು ಗ್ರಾಮದ ಸೇವಾ ಸಹಕಾರ ಸಂಘ ತಮ್ಮ ಸಂಘದ ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಾರೋ ಅವರ ಹೆಸರಲ್ಲಿ ಉಚಿತವಾಗಿ ಒಂದು ಲಕ್ಷ ರೂಪಾಯಿ ಠೇವಣಿ ಇಡಲು ನಿರ್ಧರಿಸಿದೆ ಎಂದು ಘೋಷಣೆ ಮಾಡಿದೆ.


ಈಗಾಗಲೇ ಎಲ್ಲಾ ಸದಸ್ಯರ ಬೆಂಬಲ ಪಡೆದು ರೈತರ ಕಲ್ಯಾಣ ಯೋಜನೆ ಜಾರಿಗೆ ತರಲು ಸಂಬಂಧಪಟ್ಟ ಇಲಾಖೆಯ ಅನುಮೋದನೆಗಾಗಿ ಕಳುಹಿಸಲಾಗಿದೆ. ಇದಕ್ಕೆ ಬಹುತೇಕ ಅಂಕಿತ ಬೀಳುವ ಸಾಧ್ಯತೆ ಇದ್ದು, ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ