ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಾಗಬೇಕೆಂದ ಮುಖಂಡ

ಶುಕ್ರವಾರ, 26 ಅಕ್ಟೋಬರ್ 2018 (18:15 IST)
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಾಗಬೇಕು. ಹೀಗಂತ ಹಿರಿಯ ಮುಖಂಡ ಒತ್ತಾಯಿಸಿದ್ದಾರೆ.

ಜಾತಿ ಜನಾಂಗಗಳ ಮಧ್ಯೆ ಕಿಚ್ಚು ಹಚ್ಚಿದ ಸಿದ್ದರಾಮಯ್ಯನ ವಿರುದ್ದ ಪ್ರಕರಣ ದಾಖಲಾಗಬೇಕು ಎಂದು ಗೋ ಮಧುಸೂಧನ ಆಗ್ರಹಿಸಿದ್ದಾರೆ.

ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಧರ್ಮ ಒಡೆಯುವ ಹುನ್ನಾರ ನಡೆಸಿದ್ದಾರೆ ಎನ್ನವುದಕ್ಕೆ ಡಿ.ಕೆ.ಶಿವಕುಮಾರ್ ಸಾಕ್ಷಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ