ವಿದ್ಯಾಕಾಶಿಯಲ್ಲಿ ಫಾರೆನ್ಸಿಕ್ ವಿವಿ, ಜ.28ಕ್ಕೆ ಶಂಕುಸ್ಥಾಪನೆ

ಮಂಗಳವಾರ, 24 ಜನವರಿ 2023 (10:33 IST)
ಧಾರವಾಡ : ಜಿಲ್ಲೆಯಲ್ಲಿ ಆರಂಭವಾಗಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಕ್ಯಾಂಪಸ್ಗೆ ಇದೇ ತಿಂಗಳ 28ರಂದು ಶಂಕು ಸ್ಥಾಪನೆ ನಡೆಯಲಿದೆ.

ವಿದ್ಯಾಕಾಶಿ ಎಂದೇ ಹೆಸರು ಪಡೆದ ಧಾರವಾಡಕ್ಕೀಗ ಮತ್ತೊಂದು ಹೆಮ್ಮೆಯ ಗರಿ ಬರಲಿದೆ. ಈಗಾಗಲೇ ಧಾರವಾಡದಲ್ಲಿ ಕರ್ನಾಟಕ ವಿವಿ, ಕಾನೂನು ವಿವಿ, ಕೃಷಿ ವಿವಿ ಇವೆ.

ಇದರ ಜೊತೆಗೆ ಐಐಟಿ ಹಾಗೂ ಐಐಐಟಿ ಕೂಡಾ ಬಂದಿವೆ. ಈಗ ಫಾರೆನ್ಸಿಕ್ ಯುನಿವರ್ಸಿಟಿ ಕ್ಯಾಂಪಸ್ ಧಾರವಾಡದಲ್ಲಿ ಆರಂಭವಾಗಲಿದೆ.

ಗುಜರಾತಿನಲ್ಲಿ ಫಾರೆನ್ಸಿಕ್ ವಿಶ್ವವಿದ್ಯಾಲಯ ಇದೆ. ಇದರ ಕ್ಯಾಂಪಸ್ ಇದೇ ಮೊದಲು ಬಾರಿಗೆ ದಕ್ಷಿಣ ಭಾರತದಲ್ಲಿ ಆರಂಭ ಆಗುತ್ತಿದ್ದು, ಅದು ಧಾರವಾಡದಲ್ಲಿ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಫಾರೆನ್ಸಿಕ್ ಕ್ಯಾಂಪಸ್ಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ