ಬೆಂಗಳೂರು ಗ್ರಾಮಾಂತರ ಕಾಲೇಜುಗಳಿಗೆ ಹೊಸ ಗೈಡ್ಲೈನ್ಸ್

ಮಂಗಳವಾರ, 24 ಜನವರಿ 2023 (08:47 IST)
ಬೆಂಗಳೂರು : ಪ್ರತಿಷ್ಠಿತ ಕಾಲೇಜು ಅವರಣದಲ್ಲಿ ನಡೆದ ವಿದ್ಯಾರ್ಥಿನಿ ಲಯಸ್ಮಿತಾ ಕೊಲೆ ಇಡೀ ಬೆಂಗಳೂರನ್ನೆ ನಡುಗಿಸಿತ್ತು.
 
ಕಾಲೇಜಿಗೆ ತಮ್ಮ ಮಕ್ಕಳನ್ನ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು. ಇದರಿಂದ ಎಚ್ಚೆತ್ತಿರುವ ಪೊಲೀಸರು ಇಲಾಖೆ ಬೆಂಗಳೂರು ಗ್ರಾಮಾಂತರದ ಠಾಣಾ ವ್ಯಾಪ್ತಿಗಳಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ಹೊಸ ಗೈಡ್ ಲೈನ್ ಹೊರಡಿಸಿದೆ.

ಕಾಲೇಜು ಆಡಳಿತ ಮಂಡಳಿಗಳು ಇನ್ಮುಂದೆ ಈ ಹೊಸ ಗೈಡ್ ಲೈನ್ಸ್ ಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪೊಲೀಸರು ತಾಕೀತು ಮಾಡಿದ್ದಾರೆ.

ಲಯಸ್ಮಿತಾ ಕೊಲೆಗೆ ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಂಡು ಬಂದಿದ್ದರಿಂದ ಪೊಲೀಸರು ಒಂದಷ್ಟು ಅಂಶಗಳನ್ನ ಫೈಂಡೌಟ್ ಮಾಡಿ ಪಬ್ಲಿಕ್ ಸೇಪ್ಟಿ ಆಕ್ಟ್ ಅಡಿಯಲ್ಲಿ ಹೊಸ ಗೈಡ್ ಲೈನ್ ಹೊರಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ