ಜೈಪುರಕ್ಕೆ ಹೋಗಿ ಕೈ ಮುರಿದುಕೊಂಡಿದ್ದೆ : ಬಸವರಾಜ ಹೊರಟ್ಟಿ

ಮಂಗಳವಾರ, 24 ಜನವರಿ 2023 (10:23 IST)
ಧಾರವಾಡ : ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಟ ಆಡಿದ್ದೇನೆ. ಎರಡು ಬಾರಿ ಯೂನಿವರ್ಸಿಟಿ ಬ್ಲೂ ಆಗಿದ್ದೆ. ಅದರಲ್ಲಿ ಒಂದು ಬಾರಿ ಕಬಡ್ಡಿ ಆಟದಲ್ಲಿ ನಾನು ಜೈಪುರಕ್ಕೆ ಹೋಗಿದ್ದಾಗ ಕೈಮುರಿದುಕೊಂಡು ಬಂದಿದ್ದೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಕಬಡ್ಡಿ ಆಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಡಿದ್ದೇನೆ. 25 ವರ್ಷದ ನಂತರ ಇವತ್ತು ಆಡಿದ್ದು ಬಹಳ ಖುಷಿಯಾಗಿದೆ ಎಂದರು.

ಪ್ರತಿವರ್ಷ ಶಾಸಕರ ದಿನಾಚರಣೆಯಲ್ಲಿ ನಾವು ಕಬಡ್ಡಿ ಅಡುತ್ತಿದ್ದೆವು. ಆದರೆ ಈಗ ಅದು ಬಂದ್ ಆಗಿದೆ. ಕಬಡ್ಡಿಯಲ್ಲಿ ಸಂಪೂರ್ಣವಾದ ವ್ಯಾಯಾಮ ಸಿಗುತ್ತದೆ.

ಎಷ್ಟೋ ವರ್ಷದ ನೆನಪು ಇಂದು ಆಗಿದೆ. ನಾನು ಜೈಪುರಕ್ಕೆ ಹೋಗಿ ಕಬಡ್ಡಿ ಆಡಿ ಕೈ ಮುರಿದುಕೊಂಡು ಬಂದಿದ್ದೆ ಎಂದು ಹಳೆಯ ನೆನಪನ್ನು ಹಂಚಿಕೊಂಡರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ