ಚಿರತೆಗಾಗಿ ಶೋಧ ಕಾರ್ಯ ನಡೆಸುತ್ತಿರುವ ಅರಣ್ಯ ಇಲಾಖೆ

ಶನಿವಾರ, 3 ಡಿಸೆಂಬರ್ 2022 (12:35 IST)
ಬೆಂಗಳೂರು ಹೊರವಲಯದ  ಚಿಕ್ಕಜಾಲ ಹೋಬಳಿಯ ತರಬನಹಳ್ಳಿಯ ಐಟಿಸಿ‌ ಕಾರ್ಖಾನೆ ಆವರಣದಲ್ಲಿ  ಚಿರತೆ ಓಡಾಟದ ವಿಡಿಯೊ ವೈರಲ್ ಆಗಿತ್ತು.ನಿನ್ನೆಯಿಂದಲೂ ಚಿರತೆ ಕಾರ್ಯಾಚರಣೆಯಲ್ಲಿ  ಅರಣ್ಯ ಇಲಾಖೆ  ಸಿಬ್ಬಂದಿ ತೋಡಗಿದ್ದಾರೆ.ಚಿರತೆ ಓಡಾಟದ ಪ್ರದೇಶಗಳನ್ನ ಪರಿಶೀಲಿಸಿ ಸಿಬ್ಬಂದಿ ಬೋನ್ ಅಳವಡಿಸಿದಾರೆ.ಖಾಸಗಿ ಪ್ರದೇಶವಾದ್ದರಿಂದ ಯಾರಿಗೂ ಪ್ರವೇಶವನ್ನ ಐಟಿಸಿ ಭದ್ರತಾ ಸಿಬ್ಬಂದಿ ನೀಡಿಲ್ಲ.
 
ಐಟಿಸಿ ಸಂಸ್ಥೆಯ ಹೊರಭಾಗದಲ್ಲೂ ಚಿರತೆ ಓಡಾಡುವ ಸಾಧ್ಯತೆ ಇದೆ.ಆದರೆ ಈವರೆಗೂ ಸಾರ್ವಜನಿಕರಿಗೆ ಅಧಿಕೃತ ‌ಮಾಹಿತಿ ಅಥವಾ ಜಾಗೃತಿ ಮೂಡಿಸದೆ ನಿರ್ಲಕ್ಷ್ಯ ವಹಿಸಲಾಗಿದೆ.ಈಗಾಗಲೇ ಸುತ್ತಮುತ್ತಲಿನ ಜಮಿನುಗಳಲ್ಲಿ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.ಆದರೂ ಸಹ ಯಾವುದೆ ಮುನ್ನೆಚ್ಚರಿಕೆ ನೀಡಿಲ್ಲ.ಕಾರ್ಯಾಚರಣೆ ಮಾಹಿತಿ ನೀಡದೆ, ಕಾರ್ಮಿಕರಿಗೆ ರಜೆಯನ್ನೂ ನೀಡದೇ ಐಟಿಸಿ ಸಂಸ್ಥೆ ನಿರ್ಲಕ್ಷ್ಯ ತೊರುತ್ತಿದೆ.ರಜೆ ನೀಡಿದರೆ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ.ಹೀಗಾಗಿ ನಿನ್ನೆ ರಾತ್ರಿಯಿಂದಲೂ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ