ಮಹಾರಾಷ್ಟ್ರದಲ್ಲಿ ಬಿಜೆಪಿ ,ಎನ್ ಸಿಪಿ ಮೈತ್ರಿ ಸರ್ಕಾರ ರಚನೆ; ಶಿವಸೇನೆಯ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು?

ಶನಿವಾರ, 23 ನವೆಂಬರ್ 2019 (11:26 IST)
ಬೆಂಗಳೂರು : ಮಹಾರಾಷ್ಟ್ರದಲ್ಲಿ ಬಿಜೆಪಿ ,ಎನ್ ಸಿಪಿ ಸೇರಿ ಸರ್ಕಾರ ರಚಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆಯಿಂದ ಮಿತಿಮೀರಿದ ವರ್ತನೆಗೆ ತಕ್ಕ ಶಾಸ್ತಿ ಆಯ್ತು ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.



ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಮುಂದಾದ ಶಿವಸೇನೆ ಸಿಎಂ ಹುದ್ದೆ ಕೇಳಿದ ಹಿನ್ನಲೆಯಲ್ಲಿ ಬಿಜೆಪಿ ಶಿವಸೇನೆಯ ಜೊತೆಗ ಮೈತ್ರಿ ಮುರಿದುಕೊಂಡು ಎನ್ ಸಿಪಿಯ ಜೊತೆ ಮೈತ್ರಿ ಮಾಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿದೆ.


ಈ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಶಿವಸೇನೆಗೆ ಅಧಿಕಾರದ ದುರಾಸೆ. ಜನರ ವಿರುದ್ಧದ ಸರ್ಕಾರ ಮಾಡಲು ಹೊರಟಿದ್ದರು. ಶಿವಸೇನೆಗೆ ಕಡಿಮೆ ಸ್ಥಾನ ಬಂದಿದೆ. ಆದರೂ ಸಿಎಂ ಹುದ್ದೆ ಕೇಳಿದ್ರು. ಶಿವಸೇನೆಯಿಂದ ಮಿತಿಮೀರಿದ ವರ್ತನೆಗೆ ಇದು ತಕ್ಕ ಪಾಠ ಕಲಿಸಿದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ