ಮತ್ತೊಮ್ಮೆ ವಾರ್ಡ್ ಮರುವಿಂಗಡಣೆಗೆ ಆಯೋಗ ರಚನೆ

ಭಾನುವಾರ, 25 ಜೂನ್ 2023 (20:23 IST)
ಬೆಂಗಳೂರು ಮಹಾನಗರ ಪಾಲಿಕೆಯ ಅವಧಿ ಮುಗಿದು, ಇಲ್ಲಿಗೆ ಎರಡು ವರ್ಷ ಒಂಬತ್ತು ತಂಗಳು ಗಳೇ ಕಳೆದಿವೆ,ಇದ್ರಿಂದ ಜನರು ತಮ್ಮ ಜನ ನಾಯಕರಿಲ್ಲದೇ ತಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳ್ಬೇಕು ಅಂತಾ ಬೆಸತ್ತಿದ್ದಾರೆ,ಆದ್ರೆ ಪಾಲಿಕೆ ಚುನಾವಣೆಯ ಭಾಗ್ಯ ಮಾತ್ರ ಯಾಕೋ ಕೂಡಿಬರ್ತಿಲ್ಲಾ,ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಮಾಡಿ 2022ರ ಜುಲೈ 14 ರಂದು ಅಧಿಸೂಚನೆ ಹೊರಡಿಸಿತ್ತು,ಹೀಗಾಗಿ ಪಾಲಿಕೆ ಚುನಾವಣಾ ಒಂದಿಷ್ಟು ದಿನಗಳ ಕಾಲ ಮುಂದೂಡಲ್ಪಟ್ಟಿತ್ತು.

ಇದೀಗ ರಾಜ್ಯ ಸರಕಾರವು ನಿನ್ನೆ  ಬಿಬಿಎಂಪಿ ಚುನಾವಣೆ ಸಂಬಂಧ ವಾರ್ಡ್‌ಗಳ  ಮರುವಿಂಗಡಣೆ ಮಾಡಿ,ಜೊತೆಗೆ ಇದು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಮರುವಿಂಗಡಣಾ ಆಯೋಗವನ್ನು ಪುನರ್‌ರಚಿಸಿ ಎಂದು ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದೆ.ಇನ್ನೂ ಹೈಕೋರ್ಟ್‌ ಆದೇಶದಂತೆ ಪಾಲಿಕೆಯ ವಾರ್ಡ್‌ಗಳ ಪುನರ್‌ ವಿಂಗಡಣಾ ಆಯೋಗವನ್ನು ರಚಿಸಲಾಗಿದೆ.ಇದಕ್ಕೆ ಪಾಲಿಕೆಯ ಮುಖ್ಯ ಆಯುಕ್ತರ ಅಧ್ಯಕ್ಷತೆಯ ಈ ಸಮಿತಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರು, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ, ಈಗಾಗಲೇ ಎರಡೂವರೆ ವರ್ಷ ಕಳೆದರು ಪಾಲಿಕೆ ಚುನಾವಣೆ ನಡೆದಿಲ್ಲ, ಬಿಜೆಪಿ ಸರಕಾರವು ಬಿಬಿಎಂಪಿ ಕಾಯಿದೆ ಜಾರಿ ವಾರ್ಡ್ ಗಳ ಮರು ವಿಂಗಡರಣೆ ನೆಪದಲ್ಲಿ ಚುನಾವಣೆ ಮುಂದೂಡಲಾಗಿತ್ತು ಇದೀಗ ಕಾಂಗ್ರೆಸ್ ಸರ್ಕಾರ ಸರದಿಯಾಗಿದೆ ಇದರಿಂದ ಸಾರ್ವಜನಿಕರು ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳ್ಬೇಕು ಆದಷ್ಟು ಬೇಗ ಚುನಾವಣೆ ನಡೆಸಿ ಎಂದು ಸರ್ಕಾರಕ್ಕೆ ‌ಮನವಿ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ