ನಮ್ಮ ಧ್ವನಿ ಧಮನ ಮಾಡಿದ್ದಾರೆ-ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಗುರುವಾರ, 20 ಜುಲೈ 2023 (17:55 IST)
ಕರ್ನಾಟಕ ವಿಧಾನ ಮಂಡಲದಲ್ಲಿ ಕಂಡು ಕೇಳರಿಯದ ಅಮಾನತು ಮಾಡುವ ಕೆಲಸ ಆಗಿದೆ.ಸದನದಲ್ಲಿ ನಡೆದ ಎಲ್ಲಾ ವಿಚಾರ ರಾಜ್ಯಪಾಲರಿಗೆ ತಿಳಿಸಿದ್ದೇವೆ.ಜೈನ ಮುನಿ ಹತ್ಯೆ ಇಂದ ಇಡಿದು ಈವರೆಗಿನ ಎಲ್ಲಾ ಚರ್ಚೆ ಹೇಳಿದ್ದೇವೆ.ಬರಗಾಲ ಇದೆ, ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡುವಂತೆ ಕೇಳಿದ್ದೇವೆ ಈವರೆಗೂ ಆಗಿಲ್ಲ.ಈ ಶಿಷ್ಟಾಚಾರ ಬಗ್ಗೆ ಮಾತನಾಡಿದಾಗ ಸರ್ಕಾರದ ರೀತಿ, ಸ್ಪೀಕರ್ ಧ್ವನಿಗೂಡಿಸಿದ್ರು.ವಿಪಕ್ಷಗಳ ಧ್ವನಿ ಅಡಗಿಸೋ ಕೆಲಸ ಮಾಡಿದೆ.ಬಹಳ ಕಠಿಣ ನಿರ್ಣಯ ಮಾಡಿ ಹೊರಗೆ ಹಾಕಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
 
ಕರ್ನಾಟಕದ ಇತಿಹಾಸಲದಲ್ಲಿ ಇಂತ ನಿರ್ಣಯ ಆಗಿಲ್ಲ.ನಮ್ಮ ಧ್ವನಿ ಧಮನ ಮಾಡಿದ್ದಾರೆ.ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಆಗದಕ್ಕೆ ಈ ರೀತಿ ಮಾಡ್ತಿದ್ದಾರೆ.ಜನರ ಪರ ಧ್ವನಿ ಎತ್ತುವ ಕೆಲಸಕ್ಕೆ ನಮಗೂ ನಂಬರ್ ಇದೆ.ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದ .ರಾಜಕೀಯ ರೊಟ್ಟಿ ಮಾಡಿಕೊಳ್ಳಲು ಬಳಸಿದ್ದಾರೆ.ಸ್ಪೀಕರ್ ಹೋಗಿ ಕಾರ್ಯಕ್ರಮದಲ್ಲಿ ಭಾಹಿಯಾಗಿ ಊಟದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಅವರ ವಿರುದ್ಧವು ನೋ ಕಾನ್ಫಿಡೆನ್ಸ್ ಮೋಷನ್ ಮಾಡಲಾಗಿದೆ.ಅವರ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಬಸವರಾಜ್ ಬೊಮ್ಮಾಯಿ ಖಂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ