ಜನರನ್ನ ಯಾಮಾರಿಸಿ ಗೆಲ್ಲಬೇಕು ಅಂತ ಮಾಡಿದ್ದಾರೆ-ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಮಂಗಳವಾರ, 30 ಮೇ 2023 (18:01 IST)
ಉಚಿತ ಯೋಜನೆ ವಿಚಾರವಾಗಿ ನಿನ್ನೆ ಸಿಎಂ ಸಭೆ ಮಾಡಿದ್ದಾರೆ.ಸುಧೀರ್ಘ ಸಭೆಯಲ್ಲಿ ಏನಾಗಿದೆ ಗೊತ್ತಿಲ್ಲ.ಮಾಧ್ಯಮದಿಂದ ತಿಳಿದ ವಿಚಾರ.ಎಲ್ಲಾ ಉಚಿತ ನೀಡಿದ್ರೆ, ಅಭಿವೃದ್ಧಿ ಕಾರ್ಯ ಕುಂಟಿತ ಆಗಲಿದೆ.ಆಶ್ವಾಸನೆ ನೀಡಿದ್ರು ಎಲ್ಲರಿಗೂ ಸಿಗುತ್ತೆ ಅಂತ.ಅತ್ತೆಗೋ, ಸೊಸೆ ಗೋ ಅಂತ ಮೊದಲು ಹೇಳಿರಲಿಲ್ಲ.ಏನು ಮಾಡಲಿದ್ದಾರೆ ಅಂತ ಕರ್ನಾಟಕದ ಜನತೆಗೆ ಕಾಡ್ತಿದೆ.ಒಂದನೇ ತಾರೀಖು ಕ್ಯಾಬಿನೆಟ್ ಇದೆ.ಅಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ.ಆರ್ಥಿಕವಾಗಿ ಕಷ್ಟ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ.ಜನರನ್ನ ಯಾಮಾರಿಸಿ ಗೆಲ್ಲಬೇಕು ಅಂತ ಮಾಡಿದ್ದಾರೆ.ಜನ ಈಗ ಅಧಿಕಾರ ಕೊಟ್ಟಿದ್ದಾರೆ.ಏನು ಮಾಡ್ತಾರೆ ಕಾದು ನೋಡೋಣ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.
 
ಎನ್.ಇ.ಪಿ ರದ್ದು ವಿಚಾರವಾಗಿ ಈಗ ಮಕ್ಕಳು ಅಧ್ಯಯನ ಶುರು ಮಾಡಿದ್ದಾರೆ.NEP ಮಾಡುವಾಗಲೇ ಸಮಿತಿ ಮಾಡಿ, ರಾಜ್ಯದ ಅಭಿಪ್ರಾಯ ತೆಗೆದುಕೊಳ್ಳಲಾಗಿದೆ.ಎಲ್ಲಾ ಎಕ್ಸ್‌ಪರ್ಟ್ ಅಭಿಪ್ರಾಯ ಪಡೆದು NEP ಜಾರಿಗೆ ತರಲಾಗಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ