ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ 75ರ ಹರೆಯದಲ್ಲೂ ಶಟಲ್ ಬ್ಯಾಡ್ಮಿಂಟನ್ ಆಡ್ತಾರೆ. ಬೆಳಿಗ್ಗೆ 6ರಿಂದ 8 ಗಂಟೆವರೆಗೂ ಬ್ಯಾಡ್ಮಿಂಟನ್ ಆಡ್ತಾರೆ. ಈ ವಯಸ್ಸಿನಲ್ಲೂ ಆರೋಗ್ಯದಿಂದ ಇರುವುದಕ್ಕೆ ಕಾರಣವೇನು ಎಂದು ಕೇಳಿದಾಗ, ಶಟಲ್ ಬ್ಯಾಡ್ಮಿಂಟನ್ ತಮ್ಮ ಆರೋಗ್ಯದ ಗುಟ್ಟು ಎಂದು ಹೇಳಿದರು. ಈಶ್ವರಪ್ಪ ಶ್ವೇತವಸ್ತ್ರಧಾರಿಯಾಗಿ ಬೆಳಿಗ್ಗೆ ಶಟಲ್ ಆಡಲು ಕ್ವೀನ್ಸ್ ರಸ್ತೆಯಲ್ಲಿರುವ ಸ್ಫೋರ್ಟ್ಸ್ ಕ್ಲಬ್‌ಗೆ ತೆರಳುತ್ತಾರೆ.