ಎಚ್‍ಡಿಡಿ ಯು ಟರ್ನ್ ರಾಜಕಾರಣಿ ಎಂದು ಮಾಜಿ ಸಚಿವ ಎ ಮಂಜು ಹೇಳಿದ್ಯಾಕೆ?

ಮಂಗಳವಾರ, 5 ಮಾರ್ಚ್ 2019 (07:23 IST)
ಹಾಸನ : ಎಚ್‍ಡಿಡಿ ಅವರು ಯು ಟರ್ನ್ ರಾಜಕಾರಣಿಗಳಲ್ಲಿ ಮೊದಲಿಗರಾಗಿದ್ದು, ಐದು ಬಾರಿ ಸ್ಪರ್ಧೆ ಮಾಡಲ್ಲ ಎಂದು ಹೇಳಿ ಮಾಡಿದ್ದಾರೆ ಎಂದು ಮಾಜಿ ಸಚಿವ ಎ ಮಂಜು ಕಿಡಿಕಾರಿದ್ದಾರೆ.


ದೇಶದಲ್ಲಿ ಇಂದಿರಾ ಗಾಂಧಿ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನ ವಿರೋಧ ಮಾಡುತ್ತ ಎಚ್‍.ಡಿ ದೇವೇಗೌಡರು ಇಂದು ತಮ್ಮ ಕುಟುಂಬದವರಿಗೆ ಟಿಕೆಟ್ ನೀಡುತ್ತಿರುವುದು ಎಷ್ಟು ಸರಿ? ದೇವೇಗೌಡರು ಮಕ್ಕಳು ಮತ್ತು ಸೊಸೆ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಆದರೆ ಪಕ್ಷದಲ್ಲಿ ಇರುವ 2ನೇ ಹಂತದ ನಾಯಕರ ಗತಿ ಏನು? ಎಂದು ಪ್ರಶ್ನಿಸಿದ್ದಾರೆ.


ಅಲ್ಲದೇ ಮೈತ್ರಿ ಧರ್ಮದಲ್ಲಿ ಹಾಸನ ಹಾಗೂ ಮಂಡ್ಯ ಎರಡರಲ್ಲಿ ಒಂದು ನಮಗೆ ಕೊಡಬೇಕು. ಆದರೆ ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಆಗದೆ ಸಚಿವ ಸಾರಾ ಮಹೇಶ್ ಅಭ್ಯರ್ಥಿ ಘೋಷಣೆ ತಪ್ಪು. ಮಂಡ್ಯ ಕ್ಷೇತ್ರವನ್ನು ಅಂಬರೀಶ್ ಕುಟುಂಬಕ್ಕೆ ಬಿಟ್ಟು ಕೊಡಲು ಒತ್ತಾಯ ಮಾಡುತ್ತೇವೆ. ಸುಮಲತಾ ಅವರೇ ಅಭ್ಯರ್ಥಿ ಮಾಡಬೇಕು ಎಂಬುವುದು ನಮ್ಮ ಒತ್ತಾಯ. ನಾನು ಹಾಸನ ಬಿಟ್ಟು ಎಲ್ಲಿಯೂ ಹೋಗಲ್ಲ. ದೇವೇಗೌಡರ ಸ್ಪರ್ಧೆ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ