ಸಮಾಜವನ್ನ ಯಾರು ಒಡಿತಾ ಇದಾರೆ.ಅಧಿಕಾರದ ಚಟಕ್ಕೆ ಹಿಂದೂ ಮುಸ್ಲಿಂರ ನಡುವೆ ಯಾರು ಗೋಡೆ ಕಟ್ಟುತ್ತಿದ್ದಾರೆ ಎಂದು ದೇಶಕ್ಕೇ ಗೊತ್ತಿದೆ.ಹಳೆ ಹುಬ್ಬಳ್ಳಿಯ ಘಟನೆಯಲ್ಲಿ 1500 ಕ್ಕೂ ಹೆಚ್ಚು ಜನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಕ್ಕೆ ಹೋಗಿದ್ದರು.ದೇವಸ್ಥಾನ ಜಖಂಗೊಳಿಸಿದ್ದರು.ಸ್ವಲ್ಪ ವ್ಯತ್ಯಾಸ ಆಗಿದ್ರೆ ಹಳೆ ಹುಬ್ಬಳ್ಳಿಗೆ ಬೆಂಕಿ ಬೀಳುತ್ತಿತ್ತು.ಇವರನ್ನೆಲ್ಲ ಬಂದಿಸಿ ಜೈಲಿಗೆ ಕಳುಹುಸಲಾಗಿತ್ತು.ಆದರೆ ಈಗ ಡಿಕೆಶಿ, ಅವರ ಮೇಲಿನ ಕೇಸ್ ವಾಪಸ್ ತೆಗೆದುಕೋಳ್ತಿನಿ ಅಂತ ಹೇಳ್ತಾಯಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಏನುಮಾಡಲು ಹೋರಟ್ಟಿದ್ದಾರೆ ಅಂತ ಜನರಿಗೆ ಹೇಳಬೇಕಾಗಿದೆ .ವೋಟಿಗಾಗಿ ಬಾರಾಖೂನ್ ಮಾಪ್ ಮಾಡಲು ಹೊರಟಿದ್ದಾರೆ .ಡಿಸಿಎಂ ಡಿಕೆ ಶಿವಕುಮಾರ್ ಸಮಾಜಕ್ಕೆ ಏನು ಸಂದೇಶ ಕೊಡುವುದಕ್ಕೆ ಹೊರಟಿದ್ದಾರೆ .ಎಲ್ಲ ಮುಸ್ಲಿಂಮರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ..? ಸರಕಾರದ ನಡೆ ಹಿಂದೂ ಮುಸ್ಲಿಂ ರ ನಡುವೆ ಅಂತರವನ್ನ ಹೆಚ್ಚಿಸುತ್ತಿದೆ.ಶಿವಮೊಗ್ಗದ ರಾಗಿ ಗುಡ್ಡದಲ್ಲಿ ಹಿಂದೂಗಳ ಮನೆಗಳನ್ನ ಹುಡುಕಿ ಹುಡುಕಿ ಹಲ್ಲೆ ಮಾಡಿದ್ದಾರೆ.ಹೆಣ್ಣು ಮಕ್ಕಳಮೇಲೆ ಅವಾಚ್ಯವಾಗಿ ಮಾತನಾಡಿದ್ದಾರೆ.ಹೋರಗೆ ಬಂದರೆ ಏನು ಮಾಡುತ್ತೇವೆ ಎಂದು ಕಿಡಕಿಯಲ್ಲಿ ಹೇಳಿ ಹೋಗಿದ್ದಾರೆ.ಈದ್ ಮೀಲಾದ್ ಹಬ್ಬದ ವೇಳೆ ಈ ಘಟನೆ ನಡೆದಿದೆ
ಪ್ರವಾದಿಗಳು ಜಗತ್ತಿಗೆ ಶಾಂತಿ ಸಂದೇಶ ಸಾರಿದ್ದರು ಆದರೆ ಇವರು ಹಬ್ಬವನ್ನ ಆಚರಿಸುವ ರೀತಿನಾ ಇದು.ರಾಗೀಗುಡ್ಡದಲ್ಲಿ 40 ಕ್ಕೂ ಹೆಚ್ಚು ರೌಡಿ ಶೀಟರ್ ಗಳು ಇದ್ದಾರೆ.ಔರಂಗಜೇಬ್ ಯಾರು ಈ ಸಂದರ್ಭದಲ್ಲಿ ಯಾಕೆ ಪೋಟೋ ಹಾಕಿದರು.ಹಿಂದೂ ಸೈನಿಕನ ಎದೆಯಮೇಲೆ ಬರ್ಚಿ ಇಟ್ಟ ಫೋಟೊ ತೋರಿಸುವುದು ಯಾಕೆ..? ಇಂತಹ ಪ್ರಚೋದನೆ ಮಾಡಿದವರನ್ನ ಭಂದಿಸಬೇಕಿತ್ತು .ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಕೊಟ್ಟಿಲ್ಲ .ಬ್ಯಾಲನ್ಸ್ ಮಾಡುವಂತೆ ಪೊಲೀಸರಿಗೆ ಹೇಳುತ್ತಿದ್ದಾರೆ.ಕಲ್ಲೇಟು ತಿಂದು, ಆಸ್ಪತ್ರೆಗೆ ದಾಖಲಾಗಿರುವ ಅಮಾಯಕ ಹಿಂದೂಗಳ ಮೇಲೆ ದೂರು ದಾಖಲಿಸಿದ್ದಾರೆ.ಹಿಂದೂ - ಮುಸ್ಲಿಂ ನೆಮ್ಮದಿಯಿಂದ ಬದುಕಲು ಸರಕಾರ ಬಿಡುತ್ತಿಲ್ಲ .ವೋಟ್ ಬ್ಯಾಂಕ್ ಕಾಪಾಡಿಕೊಳ್ಳಲು, ರಕ್ಷಣೆ ಕೊಡುತ್ತೆವೆ ಅಂತ ಸಂದೇಶ ರವಾನಿಸಲು ಹಿಂದೂಗಳಿಗೆ ಹಿಂಸೆ ನೀಡುತ್ತಿದ್ದಾರೆ .ಗೃಹ ಸಚಿವರು ಇನ್ನು ಸ್ಥಳಕ್ಕೆ ಭೇಟಿ ನೀಡಿಲ್ಲ.ರಾಗಿಗುಡ್ಡದಲ್ಲಿ ಹಿಂದೂಗಳು ಬದುಕಲು ಕಷ್ಟ ವಾಗಿದೆ.ಹೊರಗೆ ಹೇಗೆ ಓಡಾಡುವುದು ಅಂತ ಪ್ರಶ್ನೆ ಮಾಡ್ತಿದ್ದಾರೆ .ಘಟನೆಯಿಂದ ಸರಕಾರಕ್ಕೆ ದೊಡ್ಡ ಡ್ಯಾಮೇಜ್ ಆಗಿದೆ .ಡ್ಯಾಮೇಜ್ ಕಂಟ್ರೋಲ್ ಗಾಗಿ ಸಚಿವ ಸೇರಿದಂತೆ ಕೆಲವರು ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ.ಪ್ರಾಮಾಣಿಕವಾಗಿ ಶಾಂತಿ ಕಾಪಾಡುವ ಕೆಲಸ ಮಾಡಿ ಎಂದು ಮಾಜಿ ಸಚಿವ ಆರಗ ಜ್ಣಾನೇಂದ್ರ ಹೇಳಿದ್ದಾರೆ.