ಶ್ರೀರಾಮನ ಸುಂದರ ಚಿತ್ರ ಬರೆದ ಕ್ರಿಕೆಟಿಗ ಕುಲದೀಪ್ ಯಾದವ್
ಇದೀಗ ಕ್ರಿಕೆಟಿಗ ಕುಲದೀಪ್ ಯಾದವ್ ಶ್ರೀರಾಮ ಮತ್ತು ಅವನ ಬಂಟ ಆಂಜನೇಯನ ಸುಂದರ ಚಿತ್ರ ಬರೆದಿದ್ದು, ಈ ಫೋಟೋಗಳು ಆನ್ ಲೈನ್ ನಲ್ಲಿ ವೈರಲ್ ಆಗಿದೆ.
ಕುಲದೀಪ್ ಯಾದವ್ ಕೇವಲ ಕ್ರಿಕೆಟಿಗ ಮಾತ್ರವಲ್ಲ, ಅವರು ಒಬ್ಬ ಚಿತ್ರಕಲಾವಿದ ಕೂಡಾ. ಇದೀಗ ಸ್ವತಃ ತಮ್ಮ ಕೈಯಾರೆ ಶ್ರೀರಾಮ ಮತ್ತು ಹನುಮನ ಚಿತ್ರಗಳನ್ನು ರಚಿಸಿದ್ದಾರೆ. ಕುಲದೀಪ್ ಯಾದವ್ ಬಿಡಿಸಿರುವ ಈ ಚಿತ್ರವನ್ನು ನೆಟ್ಟಿಗರು ಬಹಳ ಕೊಂಡಾಡಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮನ ಭವ್ಯ ಮಂದಿರ ಲೋಕಾರ್ಪಣೆಯಾಗುತ್ತಿದೆ. ಇದರ ಬೆನ್ನಲ್ಲೇ ಕುಲದೀಪ್ ಯಾದವ್ ರಾಮನ ಚಿತ್ರ ಬಿಡಿಸಿ ಮಂದಿರ ಉದ್ಘಾಟನೆಗೆ ತಮ್ಮ ಶುಭಾಶಯ ಕೋರಿದ್ದಾರೆ.