ಕೊನೆಗೂ ಸಿಎಂ ಲಕ್ಕಿಹೌಸ್ ಬಿಟ್ಟುಕೊಟ್ಟ ಮಾಜಿ ಸಚಿವ

ಸೋಮವಾರ, 9 ಸೆಪ್ಟಂಬರ್ 2019 (11:09 IST)
ಬೆಂಗಳೂರು : ಮಾಜಿ ಸಚಿವ ಸಾರಾ ಮಹೇಶ್ ಅವರು ಕೊನೆಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ  ಲಕ್ಕಿ ಹೌಸ್ ನ್ನು ಬಿಟ್ಟುಕೊಟ್ಟಿದ್ದಾರೆ.ಮೈತ್ರಿ ಸರ್ಕಾರ ಬಿದ್ದು ಹೋದ ಹಿನ್ನಲೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಅವರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಂಬರ್ 2 ನಿವಾಸವನ್ನು ಖಾಲಿ ಮಾಡುವಂತೆ ಸಿಎಂ ಬಿಎಸ್‍ ವೈ ಅವರು ಅಧಿಕಾರಿಗಳ ಮೂಲಕ ಸಾರಾ ಮಹೇಶ್ ಗೆ ಸೂಚನೆ ನೀಡಿದ್ದರು.

 

ಆದರೆ ಸಿಎಂ ಮಾತಿಗೆ ಕ್ಯಾರೆ ಎನ್ನದ ಸಾರಾ ಮಹೇಶ್ ಅವರು ಇದೀಗ ಸರ್ಕಾರ ಬಿದ್ದ 50 ದಿನಕ್ಕೆ ಮಾಜಿ ಸಚಿವರು ಮನೆ ಖಾಲಿ ಮಾಡಿದ್ದಾರೆ. ಈ ಹಿಂದೆ ಹಲವು ಬಾರಿ ಅಧಿಕಾರದಲ್ಲಿದ್ದಾಗ ಸಿಎಂ  ಬಿಎಸ್‍ ವೈ ಅವರು ಇದೇ ನಿವಾಸದಲ್ಲಿ ನೆಲೆಸಿದ್ದರಿಂದ ಇದನ್ನು ಅವರ ಲಕ್ಕಿ ಹೌಸ್ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ