ಈ ಕುರಿತು ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ ತಜ್ಞ ಡಾ. ಮೋಹನ್ ಕೇಶವಮೂರ್ತಿ, “ಡಾ ವಿನ್ಸಿ ಕ್ಸಿ” (Da Vinci Xi) ಎಂಬ ರೋಬೋಟಿಕ್ನನ್ನು ೨೦೧೭ರಲ್ಲಿ ಪರಿಚಯಿಸಲಾಗಿತ್ತು. ಈ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ, ಯುರೋ-ಆಂಕೊಲಾಜಿ, ಯುರೋ-ಗೈನೆಕಾಲಜಿ, ಕಿಡ್ನಿ ಕಸಿ ಸೇರಿದಂತೆ ಹಲವು ರೀತಿಯ ಶಸ್ತ್ರಚಿಕಿತ್ಸೆಯನ್ನು ಕಡಿಮೆ ಅವಧಿಯಲ್ಲಿ, ರೋಗಿಗಳಿಗೆ ನೋವುಂಟಾಗದೇ, ಚಿಕಿತ್ಸೆ ನಂತರ ಉಂಟಾಗುವ ಸೋಂಕು ತಡೆಯುವುದು, ಯಾವುದೇ ಅಪಾಯವಿಲ್ಲದೇ ಸುಲಭವಾಗಿ ಹಾಗೂ ಯಶಸ್ವಿಯಾಗಿ ಮೂತ್ರಕೋಶಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯನ್ನು ನಡೆಸಲು ಇದು ಸಾಕಷ್ಟು ಸಹಾಯ ಮಾಡಿದೆ. ಕೆಲವರಿಗೆ ಹಳೆ ಮಾದರಿಯ ಚಿಕಿತ್ಸೆಯ ನಂತರ ಡಯಾಬಿಟಿಸ್ ಬರುವ ಸಾಧ್ಯತೆ ಇರುತ್ತಿತ್ತು, ಆದರೆ, ರೋಬೋಟಿಕ್ ಚಿಕಿತ್ಸೆಯು ಆ ಅಪಾಯವನ್ನೂ ಕಡಿಮೆ ಮಾಡಿದೆ ಎಂದರು.
ಈ ತಂತ್ರಜ್ಞಾನ ಬಳಸಿಕೊಂಡು ನಿಖರವಾದ ಶಸ್ತ್ರಚಿಕಿತ್ಸೆಗೆ ಅನುವು ಮಾಡಿಕೊಡುತ್ತದೆ. ಇದರ ಸಹಾಯದಿಂದಲೇ ಕೇವಲ 53 ತಿಂಗಳಲ್ಲಿ 500 ಶಸ್ತ್ರಚಿಕಿತ್ಸೆ ನಡೆಸಿ, ಮೈಲುಗಲ್ಲು ಸಾಧಿಸಿದ್ದೇವೆ. ಈ ೫೦೦ ರೋಗಿಗಳ ಚಿಕಿತ್ಸೆಯು ಯಶಸ್ವಿಯಾಗಿರುವುದು ಮತ್ತೊಂದು ಸಂತಸದ ವಿಷಯ ಎಂದರು.