ಒಂದೇ ವಾರದಲ್ಲಿ ನಗರದ ಹಲಸೂರು ಠಾಣಾ ಸರಹದ್ದಿನಲ್ಲಿ ನಾಲ್ಕು ಬೈಕ್ ಕಳುವಾಗಿರುವ ಬಗ್ಗೆ ವರದಿ

ಶನಿವಾರ, 9 ಅಕ್ಟೋಬರ್ 2021 (20:46 IST)
ಬೆಂಗಳೂರು: ಒಂದೇ ವಾರದಲ್ಲಿ ನಗರದ ಹಲಸೂರು ಠಾಣಾ ಸರಹದ್ದಿನಲ್ಲಿ ನಾಲ್ಕು ಬೈಕ್ ಕಳುವಾಗಿರುವ ಬಗ್ಗೆ ವರದಿಯಾಗಿದೆ. ರಾಯಲ್ ಎನ್​​​ಫೀಲ್ಡ್ ಹಾಗೂ ಕೆಟಿಎಂ ಡ್ಯೂಕ್ ಬೈಕ್ ಗಳನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯಗಳು ಸೆರೆಯಾಗಿವೆ.
ಪೊಲೀಸರಿಗೆ ತಲೆನೋವಾದ ಕಳ್ಳರು: ಹಲಸೂರಿನ ಜೋಗುಪಾಳ್ಯದಲ್ಲಿ ಕೆಟಿಎಂ ಬೈಕ್ ಲಾಕ್ ಮುರಿದ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. 10 ಸೆಕೆಂಡ್​ನಲ್ಲಿ ಬೈಕ್‌ನ ಹ್ಯಾಂಡ್ ಲಾಕ್ ಮುರಿದು ಬೈಕ್ ಕಳವು ಮಾಡಿರುವ ದೃಶ್ಯ ದಾಖಲಾಗಿದೆ. ಈ ಬೈಕ್ ಕಳವು ಪ್ರಕರಣಗಳು ಹಲಸೂರು ಠಾಣೆಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಹಲಸೂರು ಠಾಣೆಯ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ