ಸಂತ್ರಸ್ತರಿಗೆ ಉಚಿತ ಶಿಕ್ಷಣ ಮುಂದಾದ ಮುಖಂಡ

ಮಂಗಳವಾರ, 28 ಆಗಸ್ಟ್ 2018 (13:38 IST)
ಕೊಡಗು ನೆರೆ ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ರಾಜ್ಯದ ವಿವಿಧೆಡೆ ದಾನಿಗಳು ಮುಂದಾಗಿದ್ದಾರೆ. ಏತನ್ಮಧ್ಯೆ ಸಂತ್ರಸ್ತರ ಕುಟಂಬಗಳ ಮಕ್ಕಳಿಗೆ ಮಾಜಿ ಸಚಿವರೊಬ್ಬರು ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ.

ಮಾಜಿ ಸಚಿವ ಹಾಗೂ ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಚೆನ್ನಿಗಪ್ಪಾ, ಕೊಡಗು ನೆರೆ ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಮುಂದಾಗಿದ್ದಾರೆ. ತಮ್ಮ ಒಡೆತನದ ವಿದ್ಯಾಸಂಸ್ಥೆಯಲ್ಲಿ ಸಂತ್ರಸ್ತರ ಕುಟುಂಬದ 100 ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ನೀಡುವುದಾಗಿ ಘೋಷಿಸಿದ್ದಾರೆ. 

ನೆಲಮಂಗಲ ಬಳಿ ಇರುವ ಶಿವಕುಮಾರ ಮಹಾಸ್ವಾಮೀಜಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜಿನಲ್ಲಿ  ಎಂಜಿನಿಯರಿಂಗ್  30, ಎಂಟೆಕ್  20, ಪಾಲಿಟೆಕ್ನಿಕ್  50 ಸೀಟ್ ಒಟ್ಟು 100 ಮಕ್ಕಳಿಗೆ ವಸತಿ ಶಿಕ್ಷಣ ನೀಡಲು ಮುಂದಾಗಿದ್ದಾರೆ.

ಈ ಮೂಲಕ ಕೊಡಗು ಸಂತ್ರಸ್ತ ಕುಟುಂಬದ ಮಕ್ಕಳಿಗೆ ಶೈಕ್ಷಣಿಕವಾಗಿ‌ ನೆರವಾಗಲು ಮುಂದಾಗಿದ್ದಾರೆ. ಶಿವಕುಮಾರಸ್ವಾಮಿಗಳ ಆಶೀರ್ವಾದ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮಾರ್ಗರ್ಶನ ದಿಂದ ನಡೆದು ಬಂದಿದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಮಾಡುತ್ತಿರುವ ಜನಸೇವೆಗೆ ನಾನು ಸಹಕಾರ  ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ಚೆನ್ನಿಗಪ್ಪಾ ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ