ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೇಲೆ ಮೋದಿಯ ಕಣ್ಣು...

ಭಾನುವಾರ, 29 ಜುಲೈ 2018 (14:18 IST)
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೇಲೆ ಮೋದಿ ಕಣ್ಣು ಬಿದ್ದಿದೆ. ಅಕ್ರಮ ಆಸ್ತಿ, ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನ ಹೊಂದಿರುವ ಬಗ್ಗೆ ಇಡಿ- ಐಟಿ ಗೆ ದೂರು ನೀಡಲಿದ್ದಾರೆ.

 ಇವರು ಪ್ರಧಾನಿ ನರೇಂದ್ರ ಮೋದಿಯಲ್ಲ... ಮಧುಗಿರಿ ಮೋದಿ.... ಹಿಂದೂ ಸಾಮ್ರಾಟ್ ಧರ್ಮಸೇನೆ ರಾಜ್ಯಾಧ್ಯಕ್ಷ.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೊಪ್ಪಳಜಿಲ್ಲೆ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 182 ಬೇನಾಮಿ ಆಸ್ತಿ ಗಳಿಕೆಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತುಮಕೂರಿನಲ್ಲಿ ಪತ್ರಿಕಾಗೊಷ್ಠಿ ನಡೆಸಿದ ಮಧುಗಿರಿ ಮೋದಿ (ಅತುಲ್ಕುಮಾರ್ ಸಬರ್ ವಾಲ್ಇಕ್ಬಾಲ್ ಅನ್ಸಾರಿ ಬೇನಾಮಿ ಆಸ್ತಿ ಗಳಿಕೆ ಕುರಿತಂತೆ ದಾಖಲೆಗಳನ್ನ ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು.

ಇಕ್ಬಾಲ್ ಅನ್ಸಾರಿ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೆರೆ ಹೆಸರುಗಳಲ್ಲಿ ಜಂಟಿಯಾಗಿ ಬೇನಾಮಿ ಆಸ್ತಿ ಮಾಡಿದ್ದಾರೆ. ಸುಮಾರು 27 ಬಾರ್ ಅಂಡ್ ರೆಸ್ಟೊರೆಂಟ್ ಗಳು ಇಕ್ಬಾಲ್ ಅನ್ಸಾರಿ ಹಾಗೂ ಪತ್ನಿ ಹೆಸರಿನಲ್ಲಿವೆ. 182 ಕ್ಕೂ ಹೆಚ್ಚು ಆಸ್ತಿಗಳನ್ನ ಇತರರ ಹೆಸರಲ್ಲಿ ಬೇನಾಮಿಯಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 300 ಕ್ಕೂ ಹೆಚ್ಚು ಪುಟಗಳ  ದಾಖಲೆಗಳನ್ನ ಇಡಿ, ಐಟಿ ಗೆ ಸಲ್ಲಿಸುತ್ತಿದ್ದೇನೆ. ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಪರಿಶೀಲನೆ ಮಾಡಿ ಇಕ್ಬಾಲ್ ಅನ್ಸಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ