3 ತಿಂಗಳು ಉಚಿತ ಎಲ್.ಪಿ.ಜಿ. ಗ್ಯಾಸ್ ಸಿಲೆಂಡರ್ ಪೂರೈಕೆ

ಬುಧವಾರ, 1 ಏಪ್ರಿಲ್ 2020 (18:56 IST)
ಕರೋನಾ ವೈರಸ್ (ಕೋವಿಡ್-19) ಹರಡುವುದನ್ನು ತಡೆಯುವ ನಿಟ್ಟಿನಲ್ಲಿ 3 ತಿಂಗಳು ಉಚಿತ ಎಲ್.ಪಿ.ಜಿ. ಗ್ಯಾಸ್ ಸಿಲೆಂಡರ್ ಪೂರೈಕೆಗೆ ಸರಕಾರ ಮುಂದಾಗಿದೆ.

ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಹಾವೇರಿ ಜಿಲ್ಲೆಯ ಫಾಲನುಭವಿಗಳಿಗೆ ಎಪ್ರಿಲ್, ಮೇ ಹಾಗೂ ಜೂನ್ ತಿಂಗಳವರೆಗೆ 14.2 ಕೆ.ಜಿ. ಉಚಿತ ಎಲ್.ಪಿ.ಜಿ. ಸಿಲಿಂಡರ್‍ಗಳನ್ನು ಪೂರೈಸಲಾಗುವುದು ಎಂದು ಭಾರತ ಪ್ರೆಟ್ರೋಲಿಯಂ ಹಾವೇರಿ ಜಿಲ್ಲೆಯ ನೋಡಲ್ ಅಧಿಕಾರಿ ಸುಬ್ರಮಣ್ಯ ತಿಳಿಸಿದ್ದಾರೆ.

ಪಾವತಿಗೆ ಅವಕಾಶ: ಕೊರೊನಾ ವೈರಸ್ ಹಿನ್ನಲೆಯಲ್ಲಿ ಕರೆನ್ಸಿ ನೋಟಿನ ಬದಲಿಗೆ ಡಿಜಿಟಲ್ ಪಾವತಿಗೆ ಗ್ರಾಹಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಹಾಗೂ ಕರೋನಾ ಸೋಂಕಿನ  ಭೀತಿಯ ಸಂದರ್ಭದಲ್ಲಿ  ಎಲ್.ಪಿ.ಜಿ. ವಿತರಕ ಸಿಬ್ಬಂದಿ, ಗೋಡೌನ್ ಕೀಪರ್, ಮೆಕ್ಯಾನಿಕ್ಸ್, ಡೆಲಿವರಿ ಹುಡುಗರು ನಿಸ್ವಾರ್ಥವಾಗಿ ತಮ್ಮ ಕರ್ತವ್ಯವನ್ನು  ನಿರ್ವಹಿಸುತ್ತಿದ್ದಾರೆ.

ಇವರಿಗೆ ಈ ಕಷ್ಟದ ಸಮಯದಲ್ಲಿ ಸಲ್ಲಿಸಿದ ಸೇವೆಗಳನ್ನು ಗುರುತಿಸಿ ಮೇಲಿನ ಯಾವುದೇ ಸಿಬ್ಬಂದಿ ಮರಣಹೊಂದಿದಲ್ಲಿ ಐದು ಲಕ್ಷ ರೂ. ಎಕ್ಸ್‍ಗ್ರೇಷಿಯಾ ಮೊತ್ತವನ್ನು ಘೋಷಿಸಿದೆ. ಎಲ್.ಪಿ.ಜಿ.ತುರ್ತು ಸಹಾಯವಾಣಿ ಸಂಖ್ಯೆ 1906  ಕಾರ್ಯನಿರ್ವಹಿಸುತ್ತಿದೆ  ಎಂದು ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ