ಸಮಸ್ಯೆಗಳ ಅಗರವಾದ ಫ್ರೀಡಂ ಪಾರ್ಕ್

ಶನಿವಾರ, 11 ಜೂನ್ 2022 (19:38 IST)
ಸ್ವಾತಂತ್ರ್ಯ ಉದ್ಯಾನವನ ಫ್ರೀಡಂಪಾರ್ಕ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಅನೇಕ ಮಹಾನ್ ನಾಯಕರು ಫ್ರೀಡಂಪಾರ್ಕ್ ನಲ್ಲಿ ಹೋರಾಟ ಮಾಡಿದ ನೆಲ ಇದು. ಈ ಫ್ರೀಢಂ ಪಾರ್ಕ್ ನಲ್ಲಿ ನಿತ್ಯ ಹಲವು ಪ್ರತಿಭಟನೆಗಳು ನಡೆಯುತ್ತೆ. ಪ್ರತಿಭಟನೆಗೆ ಹೆಸರುವಾಸಿಯಾದ ಈ ಫ್ರೀಡಂಪಾರ್ಕ್ ಈಗ ಅವ್ಯವಸ್ಥೆಯ ಅಗರವಾಗಿದೆ.ಎಲ್ಲಿ ನೋಡಿದ್ರು ಕಸದ ರಾಶಿ  ಮತ್ತೊಂದು ಕಡೆ ಕುಡಿಯಲು ನೀರಿಲ್ಲದೇ ಮುರಿದುಬಿದ್ದ ಕೊಳಯಿಗಳು. ಹೀಗೆ ಒಂದಾ ಎರಡಾ ಸಮಸ್ಯೆ. ಈ ಫ್ರೀಡಂಪಾರ್ಕ್ ಸಂಪೂರ್ಣವಾಗಿ ಸಮಸ್ಯೆಗಳ ಅಗರದಲ್ಲಿ ಸಿಲುಕಿದೆ. ಸುಮಾರು 22 ಎಕರೆ ಇರುವ ಉದ್ಯಾನವನದಲ್ಲಿ 12 ಜನ ಸೆಕ್ಯುರಿಟಿ ಗಾರ್ಡ್ ಗಳನ್ನ ನೇಮಕ ಮಾಡಬೇಕು.ಆದ್ರೆ ಇಲ್ಲಿ ಕೇವಲ ಇರುವುದು ಮೂರೇ ಜನ ಸೆಕ್ಯುರಿಟಿ ಗಾರ್ಡ್ . ಈ ಮೂವರು ಸೆಕ್ಯುರಿಟಿ ಗಾರ್ಡ್ ಗಳಿಗೆ ಕಳೆದ ನಾಲ್ಕೈದು ತಿಂಗಳಿಂದ ಸಂಬಳವಾಗಿಲ್ಲ. ಅದ್ರು ಈ ಸಿಬ್ಬಂದಿಗಳು ಮಾತ್ರ ಫ್ರೀಡಂಪಾರ್ಕ್ ನ್ನ ಹಗಲು-ರಾತ್ರಿ ಎನ್ನದೇ ಕಾವಲು ಕಾಯ್ತಿದ್ದಾರೆ.
ಸೆಕ್ಯುರಿಟಿ ಗಾರ್ಡ್ ದ್ದು ಒಂದು ರೀತಿಯ ಸಮಸ್ಯೆ ಆದ್ರೆ,ಸಾಮಾನ್ಯ ಜನರದ್ದು ಮತ್ತೊಂದು ರೀತಿಯ ಸಮಸ್ಯೆ. ಇನ್ನು ಜನರು ಹಲವು ಬೇಡಿಕೆಗಳನ್ನ ಇಟ್ಟುಕೊಂಡು ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಿ ಧರಣಿ ನಡೆಸ್ತಾರೆ. ಹೀಗೆ ಧರಣಿ ನಡೆಸುವ ಜನರಿಗೆ ಮೂಲಭೂತ ವ್ಯವಸ್ಥೆ ಇಲ್ಲ. ಕುಡಿಯಲು ನೀರಿಲ್ಲ,  ಶೌಚಾಲಯವು ಇಲ್ಲ, ಸ್ವಚ್ಛತೆ ಅಂತೂ ಇಲ್ವೇ ಇಲ್ಲ. ಅಂದಹಾಗೆ ಈ ಫ್ರೀಡಂಪಾರ್ಕ್ ಬಿಬಿಎಂಪಿ ಸುಪರ್ದಿಗೆ ಬರುತ್ತೆ. ಪ್ರತಿ ತಿಂಗಳು ಬಿಬಿಎಂಪಿ ಪೌರಕಾರ್ಮಿಕರಿಗೆ , ಸೆಕ್ಯುರಿಟಿ ಗಾರ್ಡ್ ಗಳಿಗೆ ಸಂಬಳ ಕೊಡ್ತಾರೆ. ಆದ್ರೆ ಈಗ ಸಂಬಳ ಕೊಡದಿರುವುದರಿಂದ ಕಸ ಗುಡಿಸುವ ಸಿಬ್ಬಂದಿಗಳು ಇಲ್ಲದಂತಾಗಿದೆ. ಇನ್ನು ಸಂಬಳ ಇಲ್ಲದೆ ಸೆಕ್ಯುರಿಟಿ ಗಾರ್ಡ್ ಗಳು ಅತಂತ್ರರಾಗಿದ್ದಾರೆ.
ಇನ್ನು ಅನೇಕ ಪ್ರತಿಭಟನೆ ನಡೆಯುವ ಫ್ರೀಡಂಪಾರ್ಕ್ ಕಡೆ ಅಧಿಕಾರಿಗಳು ದಿವ್ಯಾ ನಿರ್ಲಕ್ಷ್ಯವಹಿಸಿದ್ದಾರೆ. ಇದೇ ವಿಷಯವಾಗಿ ಎಷ್ಟೋ ಬಾರಿ ಗಂಡಸಿ ಸದಾನಂದ ಸ್ವಾಮಿ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸ್ವಾತಂತ್ರ್ಯ ಉದ್ಯಾನವನ ಉಳಿಸುವಂತೆ ಮನವಿಮಾಡಿಕೊಂಡಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಗಮನಹಾರಿಸುತ್ತಿಲ್ಲ. ಹೊಸ ಕಮಿಷನರ್ ಕೂಡ ಭರವಸೆ ಕೊಡ್ತಾರೆ ಹೊರೆತು ಸಮಸ್ಯೆ ಮಾತ್ರ ಬಗೆಹಾರಿಸುವ ಕಡೆ ನಿಗಾವಹಿಸುತ್ತಿಲ್ಲ. ಇತ್ತಾ ಬಿಬಿಎಂಪಿ ನೂತನ ಕಮಿಷನರ್ ತುಷಾರ್ ಗಿರಿನಾಥ್ ಅಂತೂ ಕೈಗೆ ಸಿಗ್ತಿಲ್ಲ. ಇನ್ನು ಸಮಸ್ಯೆ ಬಗೆಹಾರಿಸುತ್ತಾರಾ? ಯಾವಾಗ ಕಾಲ್ ಮಾಡಿದ್ರು ಮಧ್ಯಾಹ್ನದ ನಂತರ ಸಿಗ್ತೇವೆ ಅಂತಾರೆ . ಮಧ್ಯಾಹ್ನವು ಸಿಗದೇ ಇರ್ತಾರೆ. ಹೀಗೆ  ಕೈಗೆ ಸಿಗದ ಮಟ್ಟಿಗೆ ನೂತನ ಕಮಿಷನರ್ ಫುಲ್ ಬ್ಯುಸಿಯಾಗಿದ್ದಾರೆ.ಇನ್ನು ಸಮಸ್ಯೆ ಬಗೆಹಾರಿಸದ  ಬಿಬಿಎಂಪಿಯ ಭ್ರಷ್ಟ ಆಡಳಿತದ ವಿರುದ್ಧ ಗಂಡಸಿಸದಾನಂದಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಬಿಬಿಎಂಪಿ ಅಂದ್ರೆನೇ ಬ್ರಹ್ಮಾಂಡ ಭ್ರಷ್ಟಾಚಾರ. ಇಲ್ಲಿ ಯಾವುದೇ ಕೆಲಸವು ಸರಿಯಾಗಿ ನಡೆಯಲ್ಲ. ಅಧಿಕಾರಿಗಳು ಕಣ್ಮುಚಿಕುಳಿತ್ತಾರೆ ಹೊರೆತು ಸಮಸ್ಯೆ ಮಾತ್ರ ಬಗೆಹಾರಿಸುವ ಮನಸ್ಸುಮಾಡಲ್ಲ. ಇನ್ನು ಈ ಬಿಬಿಎಂಪಿ ಅಧಿಕಾರಿಗಳಿಗೆ ಯಾವಾಗ ಬುದ್ದಿಬರುತ್ತೋ? ಬಡವರ ಹಣ ಕೊಳ್ಳೆ ಹೊಡೆಯದೇ ಯಾವಾಗ ಸೂಕ್ತ ಕೆಲಸ ಮಾಡ್ತಾರೋ ? ಆ ಭಗವಂತನ್ನೇ ಬಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ